ಪ್ರಾತಿನಿಧಿಕ ಚಿತ್ರ
ಕುದೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ಇಲ್ಲಿಯ ಆದಿತ್ಯ ಟಾಕೀಸ್ ಸಮೀಪ ಬುಧವಾರ ರಾತ್ರಿ ಸ್ಥಳೀಯ ನಿವಾಸಿ ಸಾದಿಕ್ ಅಲಿಯಾಸ್ ಚೋಟು ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಲಾಗಿದೆ.
ರಿಯಲ್ ಎಸ್ಟೇಟ್ ಕೆಲಸ ಮಾಡಿಕೊಂಡಿದ್ದ ಸಾದಿಕ್ ಕೆಲ ವರ್ಷದ ಹಿಂದೆ ವ್ಯವಹಾರ ಪಾಲುದಾರ ಹಂಚಿಬಸವನಪಾಳ್ಯದ ಆಲೀಮ್ ಅಲಿಯಾಸ್ ಮೂಸ ಎಂಬುವರೊಂದಿಗೆ ಗಲಾಟೆ ಮಾಡಿಕೊಂಡಿದ್ದರು.
ಬುಧವಾರ ರಾತ್ರಿ ಟಾಕೀಸ್ ಹತ್ತಿರ ಸೈಯದ್ ಇಬ್ರಾಹಿಂ (ಆಡೂಲ್) ಜೊತೆ ಕುಳಿತಿದ್ದ ಸಾದಿಕ್ ಮೇಲೆ ಕಾರಿನಲ್ಲಿ ಬಂದ ಆಲೀಮ್, ಆಸೀಫ್ ಮತ್ತು ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿದರು.
ಆಡೂಲ್ ಸ್ಥಳದಿಂದ ಓಡಿ ಹೋಗಿದ್ದಾನೆ. ಹರ್ಷದ್ ಮತ್ತು ಸಾಹಿಲ್ ಎಂಬುವರು ಜೋರಾಗಿ ಕೂಗಿಕೊಂಡಾಗ ಜನ ಸೇರಿಸಿದರು. ಆಲಿಮ್ ಮತ್ತು ತಂಡ ಸ್ಥಳದಿಂದ ಪರಾರಿಯಾದರು.
ತೀವ್ರವಾಗಿ ಗಾಯಗೊಂಡ ಸಾದಿಕ್ ಅವರನ್ನು ಸ್ಥಳೀಯರು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕುದೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.