ADVERTISEMENT

ಲಕ್ಷ್ಮೀ ದೇವಾಲಯ ಪುನರ್‌ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 13:22 IST
Last Updated 11 ಫೆಬ್ರುವರಿ 2020, 13:22 IST
ಮಾಗಡಿಯ ಮರಲಗೊಂಡಲ ಲಕ್ಷ್ಮೀದೇವಿ ದೇವಾಲಯದ ಪುನರ್‌ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದ್ದ ಭಕ್ತರು
ಮಾಗಡಿಯ ಮರಲಗೊಂಡಲ ಲಕ್ಷ್ಮೀದೇವಿ ದೇವಾಲಯದ ಪುನರ್‌ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದ್ದ ಭಕ್ತರು   

ಮಾಗಡಿ: ಇಲ್ಲಿನ ಮರಲಗೊಂಡಲ ಗ್ರಾಮದಲ್ಲಿ ಲಕ್ಷ್ಮೀ ದೇವಾಲಯ ಜೀರ್ಣೋದ್ಧಾರ, ಪುನರ್‌ ಪ್ರತಿಷ್ಠಾಪನಾ ಮಹೋತ್ಸವ ನಡೆಯಿತು. ಇದರ ಅಂಗವಾಗಿ ಹೋಮ ನಡೆಸಲಾಯಿತು.

ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ, ಕಾಂಗ್ರೆಸ್‌ ಮುಖಂಡ ಎಚ್‌.ಸಿ.ಬಾಲಕೃಷ್ಣ, ತಾಲ್ಲೂಕು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ, ಮರಲಗೊಂಡಲ ವೆಂಕಟೇಶ್‌, ಪೋಲೋಹಳ್ಳಿ ಕೆಂಚಪ್ಪ, ಹೊಸಪೇಟೆ ಮಂಜುನಾಥ್‌, ವಕೀಲ ಎಚ್‌.ಆರ್‌.ರುದ್ರೇಶ್‌ ಹಾಗೂ ತಾಲ್ಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಕುರುಬ ಸಮುದಾಯದ ಭಕ್ತರು ಇದ್ದರು.

ಅರ್ಚಕ ಜಯರಾಮಯ್ಯ ಮತ್ತು ಮಕ್ಕಳು ಪೂಜೆ ಮತ್ತು ಉತ್ಸವ ನಡೆಸಿದರು. ಮಹಿಳೆಯರು ಹಸಿತಂಬಿಟ್ಟಿನ ಆರತಿ ಬೆಳಗಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.