ಕನಕಪುರ: ಚಿಕ್ಕಮುದುವಾಡಿ ಗ್ರಾಮದ ಲಕ್ಷ್ಮೀನರಸಿಂಹ ಜಾತ್ರಾ ಮಹೋತ್ಸವ ಮತ್ತು ಅಗ್ನಿ ಕೊಂಡೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಶುಕ್ರವಾರ ಸಂಜೆ ಬಸವೇಶ್ವರ ಎಳವಾರ ಕಾರ್ಯಕ್ರಮ ನಡೆಯಿತು. ಮನೆ ಬಂದಂತಹ ಎಳವಾರಕ್ಕೆ ಗ್ರಾಮದ ಜನತೆ ಆರತಿ ಬೆಳಗಿ ಪೂಜೆ ಮಾಡಿದರು.
ಶನಿವಾರ ಬೆಳಗ್ಗೆ 6ಕ್ಕೆ ಬಸವೇಶ್ವರ ಅಗ್ನಿ ಕೊಂಡೋತ್ಸವ ನಡೆಯಿತು. ದೇವಸ್ಥಾನದ ಮುಂಭಾಗದಲ್ಲಿ ಮಧ್ಯಾಹ್ನ ಲಕ್ಷ್ಮೀನರಸಿಂಹ ಸ್ವಾಮಿ ರಥೋತ್ಸವ ನಡೆಯಿತು.
ಸಾವಿರಾರು ಭಕ್ತರು ತೇರನ್ನು ದೇವಾಲಯದ ಮುಖ್ಯಬೀದಿಯಲ್ಲಿ ಎಳೆದರು. ವೀರಗಾಸೆ, ದಿಗಂಬರಿ ವೇಷ, ಹುಲಿವೇಷ, ಪೂಜಾ ಕುಣಿತ, ಯುವ ಕಲಾವಿದರ ನೃತ್ಯ ಮೆರವಣಿಗೆ ಗಮನ ಸೆಳೆದವು.
ಜಾತ್ರೆಗೆ ಬಂದ ಜನರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು. ಮಾರಮ್ಮ ಮತ್ತು ಲಕ್ಷ್ಮಿನರಸಿಂಹ ಮೂರ್ತಿಗಳಿಗೆ ಚಿನ್ನಾಭರಣ ತೊಡಿಸಿ ಅಲಂಕಾರ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.