ADVERTISEMENT

ರಾಮನಗರದಲ್ಲಿ ರಾಜ್ಯದ ಮೊದಲ ತಿರುಪತಿ ದೇವಾಲಯ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 15:25 IST
Last Updated 7 ಜೂನ್ 2019, 15:25 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ರಾಮನಗರ: ತಿರುಪತಿಯ ಆಡಳಿತ ಮಂಡಳಿಯು ಕರ್ನಾಟಕದಲ್ಲಿ ದೇಗುಲ ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕಾಗಿ ಕಳೆದೊಂದು ವರ್ಷದಿಂದ ರಾಮನಗರ ಜಿಲ್ಲೆಯಲ್ಲಿ ಜಾಗ ಹುಡುಕಲಾಗುತ್ತಿದೆ.

ರಾಜ್ಯದ ಮೊದಲ ತಿರುಪತಿ ದೇವಾಲಯ ರಾಮನಗರದಲ್ಲಿ ನಿರ್ಮಾಣಗೊಳ್ಳುವ ಕುರಿತು ಸ್ವತಃ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಒಟ್ಟು 15–20 ಎಕರೆ ಜಮೀನಿಗೆ ಮನವಿ ಬಂದಿದೆ. ಜಿಲ್ಲಾಡಳಿತವು ಜಿಲ್ಲೆಯ ಕೂಟಗಲ್, ಬಿಡದಿ ಸೇರಿದಂತೆ ವಿವಿಧೆಡೆ ಜಾಗ ಗುರುತಿಸಿದ್ದು, ಅದು ದೇವಸ್ಥಾನ ಸಮಿತಿಗೆ ಒಪ್ಪಿಗೆ ಆಗಿಲ್ಲ.

ರಾಮನಗರದಲ್ಲಿ ಈ ದೇಗುಲ ನಿರ್ಮಾಣವಾದರೆ ರಾಜ್ಯದ ಮೊದಲ ಹಾಗೂ ದೇಶದ ನಾಲ್ಕನೇ ತಿರುಪತಿ ದೇಗುಲ ಇದಾಗಲಿದೆ ಎನ್ನಲಾಗಿದೆ. ದೇಗುಲ ನಿರ್ಮಾಣಕ್ಕೆ ಹೆದ್ದಾರಿ ಪಕ್ಕದ ಜಾಗವೇ ಬೇಕು ಎನ್ನುವುದು ದೇಗುಲ ಸಮಿತಿಯ ಬೇಡಿಕೆಯಾಗಿದೆ. ಬೆಂಗಳೂರು–ಮೈಸೂರು ಹೆದ್ದಾರಿ ಇಲ್ಲವೇ ಬೆಂಗಳೂರು–ಹಾಸನ ಹೆದ್ದಾರಿಯಲ್ಲಿ ಜಾಗಕ್ಕೆ ಹುಡುಕಾಟ ನಡೆದಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.