ADVERTISEMENT

ಕನಕಪುರ: ಅರ್ಥಪೂರ್ಣವಾಗಿ ಕೆಂಪೇಗೌಡ ಜಯಂತಿ ಆಚರಿಸಲು ಮುಖಂಡರ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 14:07 IST
Last Updated 21 ಜೂನ್ 2025, 14:07 IST
ಕನಕಪುರ ತಾಲೂಕು ಕಚೇರಿ ತಹಶೀಲ್ದಾರ್ ಸಭಾಂಗಣದಲ್ಲಿ ನಡೆದ ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಂಜುನಾಥ್ ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು
ಕನಕಪುರ ತಾಲೂಕು ಕಚೇರಿ ತಹಶೀಲ್ದಾರ್ ಸಭಾಂಗಣದಲ್ಲಿ ನಡೆದ ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಂಜುನಾಥ್ ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು   

ಕನಕಪುರ: ಕೆಂಪೇಗೌಡರ ಜಯಂತಿಯನ್ನು ಕಾಟಾಚಾರಕ್ಕೆ ಆಯೋಜನೆ ಮಾಡಿ ಆಚರಣೆ ಮಾಡಬೇಡಿ. ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕೆಂದು ಸಂಘ–ಸಂಸ್ಥೆ ಮುಖಂಡರು ತಾಲ್ಲೂಕು ಆಡಳಿತವನ್ನು ಮನವಿ ಮಾಡಿದರು.

ತಾಲ್ಲೂಕು ಕಚೇರಿ ತಹಶೀಲ್ದಾರ್ ಸಭಾಂಗಣದಲ್ಲಿ ನಡೆದ ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿವಿಧ ಸಂಘಟನೆಗಳ ಮುಖಂಡರು ಸಭೆಯಲ್ಲಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಬೆಂಗಳೂರು ಸೇರಿದಂತೆ ಈ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಜಯಂತಿಯನ್ನು ಗೌರವ ತರುವಂತೆ ಅರ್ಥಪೂರ್ಣವಾಗಿ ಆಚರಿಸಬೇಕೆಂದು ಒತ್ತಾಯಿಸಿದರು.

ADVERTISEMENT

ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಜೂನ್ 27ರಂದು ನಡೆಯುವ ಕೆಂಪೇಗೌಡರ ಜಯಂತಿಯನ್ನು ಯಾವ ರೀತಿ ಆಯೋಜನೆ ಮಾಡಬೇಕು ಎಂದು ಹೋರಾಟಗಾರರು, ಸಂಘ–ಸಂಸ್ಥೆ ಮುಖಂಡರು, ಸಾರ್ವಜನಿಕರು ಸಲಹೆ ನೀಡಿದ್ದಾರೆ. ಎಲ್ಲರ ಸಹಕಾರೊಂದಿಗೆ ಆಚರಿಸಲಾಗುವುದು ಎಂದರು.   

ತಾಲ್ಲೂಕು ಪಂಚಾಯಿತಿ ಇಒ ಅವಿನಾಶ್, ಅರಣ್ಯ ಇಲಾಖೆ ಆರ್‌ಎಫ್‌ಒ ರವಿ, ಪಶು ಇಲಾಖೆ ಡಾ.ಯು.ಸಿ ಕುಮಾರ್, ಶಿಕ್ಷಣ ಇಲಾಖೆ ಸತೀಶ್, ಕೃಷಿ ಇಲಾಖೆ ರಾಧಾಕೃಷ್ಣ , ಸಾಹಿತಿ ಕೂ.ಗಿ.ಗಿರಿಯಪ್ಪ, ಗಬ್ಬಾಡಿ ಕಾಡೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಕುಮಾರಸ್ವಾಮಿ, ಡಿ.ಕೆ.ರಾಮಕೃಷ್ಣ, ಪ್ರಶಾಂತ್ ಹೊಸದುರ್ಗ, ನಟರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.