ADVERTISEMENT

ಮಾಗಡಿ | ಚಿರತೆ ಸೆರೆ

ಜಿತೇಂದ್ರ ಆರ್
Published 13 ಮೇ 2020, 3:32 IST
Last Updated 13 ಮೇ 2020, 3:32 IST
ಮಾಗಡಿ ತಾಲ್ಲೂಕಿನಲ್ಲಿ ಸೆರೆಯಾದ ಚಿರತೆ
ಮಾಗಡಿ ತಾಲ್ಲೂಕಿನಲ್ಲಿ ಸೆರೆಯಾದ ಚಿರತೆ   

ರಾಮನಗರ: ಮಾಗಡಿ ತಾಲ್ಲೂಕಿನ ಕದರಯ್ಯನ ಪಾಳ್ಯದಲ್ಲಿ ಚಿರತೆಯೊಂದು ಅರಣ್ಯ ಇಲಾಖೆಯ ಬೋನಿನಲ್ಲಿ ಸೆರೆಯಾಗಿದೆ. ಇದೇ ಚಿರತೆ ಬಾಲಕನನ್ನು ಕೊಂದಿರಬಹುದುಎಂದು ಶಂಕಿಸಲಾಗಿದೆ.

ಚಿರತೆ ಸೆರೆಗೆ ಅರಣ್ಯ ಇಲಾಖೆ ಗ್ರಾಮದ ಸುತ್ತ ಆರು ಬೋನುಗಳನ್ನು ಇರಿಸಿತ್ತು. ಎರಡು ತಂಡಗಳನ್ನು ನರಭಕ್ಷಕ ಚಿರತೆಯಸೆರೆ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು.

ಚಿರತೆ ಸೆರೆಯಾದ ಹಿನ್ನೆಲೆಯಲ್ಲಿ ‌ಮಾಗಡಿ ತಾಲ್ಲೂಕಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಬೋನನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ADVERTISEMENT

ಆದರೆ, ಸೆರೆಯಾದ ಎರಡು ವರ್ಷದ ಗಂಡು ಚಿರತೆಯೇ ಮಗುವನ್ನು ಕೊಂದಿದೆ ಎಂಬುದು ಇನ್ನೂ ಧೃಡಪಟ್ಟಿಲ್ಲ. ಹೀಗಾಗಿ ಅದರ ಪಾದದ ಗುರುತಿನ ಆಧಾರದ ಮೇಲೆ ನರಭಕ್ಷಕ ಚಿರತೆ ಗುರುತಿಸುವ ಕಾರ್ಯ ನಡೆಯಲಿದೆ. ಇನ್ನೂ ಎರಡು ದಿನ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.