ADVERTISEMENT

ಕನಕಪುರ: ಬೋನಿಗೆ ಬಿದ್ದ ಹೆಣ್ಣು ಚಿರತೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 2:43 IST
Last Updated 13 ನವೆಂಬರ್ 2025, 2:43 IST
<div class="paragraphs"><p>ಕನಕಪುರ ದೊಡ್ಡ ತಾಂಡ್ಯ ಸಮೀಪದಲ್ಲಿ ಚಿರತೆಯನ್ನು ಅರಣ್ಯ ಅಧಿಕಾರಿಗಳು ಬೋನಿನಲ್ಲಿ ಸೆರೆ ಹಿಡಿದಿರುವುದು</p></div>

ಕನಕಪುರ ದೊಡ್ಡ ತಾಂಡ್ಯ ಸಮೀಪದಲ್ಲಿ ಚಿರತೆಯನ್ನು ಅರಣ್ಯ ಅಧಿಕಾರಿಗಳು ಬೋನಿನಲ್ಲಿ ಸೆರೆ ಹಿಡಿದಿರುವುದು

   

ಕನಕಪುರ: ರಾತ್ರಿ ಗ್ರಾಮಕ್ಕೆ ನುಗ್ಗಿ ಜನರಲ್ಲಿ ಭೀತಿ ಸೃಷ್ಟಿಸಿದ್ದ ಚಿರತೆ ದೊಡ್ಡ ತಾಂಡ್ಯ ಹೊರಭಾಗದ ಗೋಶಾಲೆ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಮಂಗಳವಾರ ರಾತ್ರಿ ಬಿದ್ದಿದೆ. 

ಮೂರರಿಂದ ನಾಲ್ಕು ವರ್ಷದ ಹೆಣ್ಣು ಚಿರತೆ ಆರೋಗ್ಯವಾಗಿದ್ದು ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟಿರುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ದೊಡ್ಡ ತಾಂಡ್ಯ ಹಾಗೂ ಗೋಶಾಲೆ ಸಮೀಪ ನಾಲ್ಕೈದು ದಿನಗಳಿಂದ ರಾತ್ರಿ ಸಂಚರಿಸುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರಿಯಾಗಿತ್ತು. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಅಧಿಕಾರಿಗಳು ಗೋಶಾಲೆ ಸಮೀಪ ಬೋನು ಇಟ್ಟಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.