
ಪ್ರಜಾವಾಣಿ ವಾರ್ತೆ
ಕುದೂರು: ಸಮೀಪದ ನವ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರು ಆತಂಕ ಪಡುವಂತಾಗಿದೆ. ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ.
ನವಗ್ರಾಮದ ಅಜೀಜ್ ಅವರ ಮನೆ ಮುಂದೆ ಕಳೆದ ಮೂರು ದಿನಗಳಿಂದಲೂ ಚಿರತೆ ಪ್ರತ್ಯಕ್ಷವಾಗುತ್ತಿದೆ. ರಾತ್ರಿ ವೇಳೆ ಮನೆ ಮುಂದೆ ಆಟೊ ಪಕ್ಕದಲ್ಲಿ ಚಿರತೆ ನಾಯಿ ರೀತಿ ರಸ್ತೆಯಲ್ಲೇ ಮಲಗಿತ್ತು. ಮಾರನೇ ದಿನವೂ ಮಧ್ಯಾಹ್ನ ಪ್ರತ್ಯಕ್ಷವಾಗಿದ್ದ ಚಿರತೆ ಫೋಟೊವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಸುತ್ತಲೂ ಬೇಲಿ ಬೆಳೆದುಕೊಂಡಿದ್ದು ಚಿರತೆ ಯಾವ ಸಮಯಲಾದರೂ ಆಕ್ರಮಣ ಮಾಡಬಹುದು. ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.