ADVERTISEMENT

‘ಜನರ ಧ್ವನಿಯಾಗಿ ಮಾಧ್ಯಮ ಕೆಲಸ ಮಾಡಲಿ‘

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 12:08 IST
Last Updated 4 ಡಿಸೆಂಬರ್ 2019, 12:08 IST
ಮಾಗಡಿ ಕುದೂರು ಮಾಧ್ಯಮ ಬಳಗದ ಘಟಕವನ್ನು ಜಿ.ಪಂ.ಸದಸ್ಯ ಅಣ್ಣೇಗೌಡ ಉದ್ಘಾಟಿಸಿದರು
ಮಾಗಡಿ ಕುದೂರು ಮಾಧ್ಯಮ ಬಳಗದ ಘಟಕವನ್ನು ಜಿ.ಪಂ.ಸದಸ್ಯ ಅಣ್ಣೇಗೌಡ ಉದ್ಘಾಟಿಸಿದರು   

ಕುದೂರು (ಮಾಗಡಿ): ಪತ್ರಿಕೆಗಳು ಸಂವಿಧಾನದತ್ತ ಆಶಯಗಳಿಗೆ ತಕ್ಕಂತೆ ಜನಧ್ವನಿಯಾಗಿ ಕೆಲಸ ಮಾಡಬೇಕಿದೆ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ರಂಗಧಾಮಯ್ಯ ತಿಳಿಸಿದರು.

ಕುದೂರು ಮಾಧ್ಯಮ ಬಳಗದ ನೂತನ ಘಟಕದ ಉದ್ಘಾಟನೆ, ಪತ್ರಿಕಾ ದಿನಾಚಾರಣೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶಾಸಕಾಂಗ, ಕಾರ್ಯಾಂಗ ಜವಾಬ್ದಾರಿಯಿಂದ ವಿಫಲವಾಗದಂತೆ ಪ್ರಜಾಪ್ರಭುತ್ವದ ಬೆಂಗಾವಲು ಆಗಿ ಮಾಧ್ಯಮ ರಂಗ ಕೆಲಸ ಮಾಡಬೇಕಾಗಿದೆ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎನ್.ಅಶೋಕ್ ಮಾತನಾಡಿ, ರಾಜಕಾರಣಿಗಳು, ಅಧಿಕಾರಿಗಳು ದಾರಿ ತಪ್ಪಿದಾಗ ಸರಿದಾರಿಗೆ ಕರೆತರುವ ಕೆಲಸ ಮಾಧ್ಯಮ ಮಾಡುತ್ತಾ ಬಂದಿದೆ ಎಂದರು.

ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಪತ್ರಿಕೆಗಳು ಸಮಾಜಕ್ಕೆ ಬೇಕಾದ ಮಾಹಿತಿ ನೀಡಿ ಜನಜಾಗೃತಿ ಮೂಡಿಸುತ್ತಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.