ADVERTISEMENT

ಲೋಕ್ ಅದಾಲತ್‌: ವಿವಿಧ ಪ್ರಕರಣಗಳ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 12:13 IST
Last Updated 8 ಡಿಸೆಂಬರ್ 2018, 12:13 IST
ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ್ ಅದಾಲತ್‌ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಎಂ.ಜಿ. ಉಮಾ ವಿಚಾರಣೆ ನಡೆಸಿದರು. ನ್ಯಾಯಾಧೀಶರಾದ ಬಿ.ಎಸ್. ಹೊನ್ನಸ್ವಾಮಿ ಹಾಗೂ ಗೋಪಾಲಕೃಷ್ಣ ರೈ ಇದ್ದರು
ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ್ ಅದಾಲತ್‌ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಎಂ.ಜಿ. ಉಮಾ ವಿಚಾರಣೆ ನಡೆಸಿದರು. ನ್ಯಾಯಾಧೀಶರಾದ ಬಿ.ಎಸ್. ಹೊನ್ನಸ್ವಾಮಿ ಹಾಗೂ ಗೋಪಾಲಕೃಷ್ಣ ರೈ ಇದ್ದರು   

ರಾಮನಗರ: ಇಲ್ಲಿನ ಜಿಲ್ಲಾ ನ್ಯಾಯಾಲಯವೂ ಸೇರಿದಂತೆ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್‌ ಕಾರ್ಯಕ್ರಮವು ನಡೆಯಿತು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಎಂ.ಜಿ. ಉಮಾ ನೇತೃತ್ವದಲ್ಲಿ ನಡೆದ ಅದಾಲತ್‌ನಲ್ಲಿ ವ್ಯಾಜ್ಯ ಪೂರ್ವ ಹಾಗೂ ಬಾಕಿ ಪ್ರಕರಣಗಳ ವಿಚಾರಣೆಯು ನಡೆಯಿತು. ಒಟ್ಟು 14 ಪೀಠಗಳ ಮೂಲಕ ಈ ವಿಚಾರಣೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.

ವ್ಯಾಜ್ಯಪೂರ್ವ ಪ್ರಕರಣಗಳ ಪೈಕಿ ಬ್ಯಾಂಕ್‌ನಿಂದ ಸಾಲ ವಸೂಲಾತಿಯ ಪ್ರಕರಣಗಳೇ ಇದ್ದವು .ಉಳಿದ ಯಾವುದೇ ಮಾದರಿಯ ಪ್ರಕರಣಗಳು ಬರಲಿಲ್ಲ.

ADVERTISEMENT

ಬಾಕಿ ಇದ್ದ ಪ್ರಕರಣಗಳ ಪೈಕಿ 542 ಅಪರಾಧ ಸ್ವರೂಪದ ಪ್ರಕರಣಗಳು ವಿಚಾರಣೆಗೆ ಬಂದಿದ್ದು, ಇವುಗಳಲ್ಲಿ 328 ಇತ್ಯರ್ಥಗೊಂಡವು. 77 ವಾಹನ ಅಪಘಾತ ಪರಿಹಾರ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ 25 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು. ಭೂವಿವಾದಕ್ಕೆ ಸಂಬಂಧಿಸಿದಂತೆ 11 ಪ್ರಕರಣಗಳ ಪೈಕಿ 2 ಇತ್ಯರ್ಥವಾದವು. ಇತರೆ 244 ಸಿವಿಲ್ ಪ್ರಕರಣಗಳ ಪೈಕಿ 58 ಪ್ರಕರಣಗಳ ವಿಚಾರಣೆಗಳು ಅಂತ್ಯಗೊಂಡವು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಸ್. ಹೊನ್ನಸ್ವಾಮಿ, ಹಿರಿಯ ನ್ಯಾಯಾಧೀಶರಾದ ಉಮೇಶ್‌ ಮೂಲಿಮನಿ, ಗೋಪಾಲಕೃಷ್ಣ ರೈ, ಅನಿತಾ, ನಳಿನಾ ಸೇರಿದಂತೆ ಜಿಲ್ಲೆ ಹಾಗೂ ತಾಲ್ಲೂಕು ನ್ಯಾಯಾಲಯಗಳ ನ್ಯಾಯಾಧೀಶರು ವಿಚಾರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.