
ಮಾಗಡಿ: ನಗರವನ್ನು ಕಸಮುಕ್ತ ನಗರವಾಗಿ ರೂಪಿಸಲಾಗುವುದು. ಸಾರ್ವಜನಿಕರು ನಮ್ಮ ಜತೆ ಕೈಜೋಡಿಸಿ, ಸುಂದರ ಪರಿಸರ ನಿರ್ಮಾಣಕ್ಕಾಗಿ ಪುರಸಭೆಯೊಂದಿಗೆ ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಟಿ.ಎನ್.ಶ್ರೀನಿವಾಸ್ ಮನವಿ ಮಾಡಿದರು.
ಕೋಟೆ ಮೈದಾನದಲ್ಲಿ ಐಎಎಸ್‌ಸಿ ಪೀಪಲ್ ಫೌಂಡೇಶನ್, ಕ್ರೈಸ್ಟ್ ಕಾಲೇಜು, ಸೆಂಟ್ ಜೋಸೆಫ್ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜು ಮತ್ತು ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ 90 ದಿನಗಳ ನಗರ ತ್ಯಾಜ್ಯ ಮತ್ತು ಸುಸ್ಥಿರತೆ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಟ್ಟಣದಲ್ಲಿ ಉತ್ಪಾದನೆಯಾಗುವ ಕಸವನ್ನು ಈಗಾಗಲೇ ಸೋಲೂರು ಕಸದ ಘಟಕಕ್ಕೆ ಕಳುಹಿಸಲಾಗುತ್ತಿದೆ. ಆದರೆ, ಘಟಕಕ್ಕೆ ಕಳುಹಿಸುವ ಮುನ್ನ ಮೂರು ಹಂತಗಳಲ್ಲಿ ಕಸದ ವಿಂಗಡಣೆ ಆಗಬೇಕಾದದ್ದು ಅತಿ ಮುಖ್ಯ. ಹಸಿ ಮತ್ತು ಒಣ ಕಸ ಮತ್ತು ಅಪಾಯಕಾರಿ ಕಸವನ್ನು ಮೂಲ ಸ್ಥಳದಲ್ಲೇ ವಿಂಗಡಿಸಿದರೆ ಮಾತ್ರ ಕಸದ ಘಟಕದಲ್ಲಿ ಸರಿಯಾದ ನಿರ್ವಹಣೆ ಸಾಧ್ಯ ಎಂದರು.
ಪುರಸಭೆಯು ಐಎಎಸ್‌ಸಿ ಪೀಪಲ್ ಫೌಂಡೇಷನ್ ಜೊತೆ ಒಡಂಬಡಿಕೆ ಮಾಡಿಕೊಂಡಿದೆ.‘ನಡ್ ತಾನ್-2025' ಪೈಲಟ್ ಯೋಜನೆಯಡಿ 83ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು 90 ದಿನಗಳ ಕಾಲ ನಗರದ ತ್ಯಾಜ್ಯ ನಿರ್ವಹಣೆ ಬಗ್ಗೆ ಅಧ್ಯಯನ ನಡೆಸಿ, ವರದಿ ಸಲ್ಲಿಸಲಿದ್ದಾರೆ. ಈ ಅಧ್ಯಯನದ ಆಧಾರದ ಮೇಲೆ ಅತ್ಯುತ್ತಮ ಕ್ರಮಗಳನ್ನು ಗುರುತಿಸಿ ಅನುಷ್ಠಾನಗೊಳಿಸುವ ಮೂಲಕ ಮಾಗಡಿಯನ್ನು ಕಸಮುಕ್ತ ನಗರವಾಗಿ ಮಾಡಲು ಉದ್ದೇಶಿಸಲಾಗಿದೆ ಎಂದರು.
ಐಎಎಸ್‌ಸಿ ಪೀಪಲ್ ಫೌಂಡೇಶನ್ ಮುಖ್ಯ ಅಧಿಕಾರಿ ಮಹೇಶ್, ವಿದ್ಯಾರ್ಥಿಗಳು ನಗರದ ಎಲ್ಲ 23 ವಾರ್ಡ್, ಮಾರುಕಟ್ಟೆ ಮತ್ತು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಕಸಮುಕ್ತ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ಒಂದು ವ್ಯವಹಾರ ಯೋಜನೆ ರೂಪಿಸಲಿದ್ದಾರೆ. ಈ ಯೋಜನೆಯನ್ನು ಪುರಸಭೆಗೆ ಸಲ್ಲಿಸಲಾಗುವುದು ಎಂದರು.
ಪುರಸಭಾ ಅಧ್ಯಕ್ಷ ಶಿವರುದ್ರಮ್ಮ, ವಿಜಯ್ ಕುಮಾರ್, ಉಪಾಧ್ಯಕ್ಷ ರಿಯಾಜ್ ಅಹಮದ್, ಪರಿಸರ ಅಭಿಯಂತರ ನಮಸ್ಕೃತ, ಎಂಜಿನಿಯರ್ ಪ್ರಶಾಂತ್ ಶೆಟ್ಟಿ, ಹೆಲ್ತ್ ಇನ್ಸ್ಪೆಕ್ಟರ್ ಶಿವಕುಮಾರ್, ಆರ್‌ಐ ರವಿಕುಮಾರ್ ಮತ್ತು ಸಿಬ್ಬಂದಿ ಹನುಮಯ್ಯ, ರೋಹಿತ್, ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಾಗಡಿ: ಕಸಮುಕ್ತ ನಗರವಾಗಿ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರು ನಮ್ಮ ಜತೆ ಕೈಜೋಡಿಸಿ ಸಹಕಾರ ನೀಡಿ ಸುಂದರ ಪರಿಸರ ನಿರ್ಮಾಣ ಮಾಡಲು ಪುರಸಭೆಯೊಂದಿಗೆ ಕೈಜೋಡಿಸಿ ಎಂದು ಪುರಸಭೆ ಮುಖ್ಯಾಧಿಕಾರಿ ಟಿ.ಎನ್. ಶ್ರೀನಿವಾಸ್ ಮನವಿ ಮಾಡಿದರು.
ಪಟ್ಟಣದ ಕೋಟೆ ಮೈದಾನದಲ್ಲಿ ಐಎಎಸ್‌ಸಿ ಪೀಪಲ್ ಫೌಂಡೇಶನ್, ಕ್ರೈಸ್ ಕಾಲೇಜು, ಸೆಂಟ್ ಜೋಸೆಫ್, ಮೌಂಟ್ ಕರ್ವೆಲ್ ಕಾಲೇಜು ಮತ್ತು ಭಾರತೀಯ ವಿಜ್ಞಾನ ಸಂಸ್ಥೆ ವತಿಯಿಂದ 90 ದಿನಗಳ ನಗರ ತ್ಯಾಜ್ಯ ಮತ್ತು ಸುಸ್ಥಿರತೆ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣದಲ್ಲಿ ಉತ್ಪಾದನೆಯಾಗುವ ಕಸವನ್ನು ಈಗಾಗಲೇ ಸೋಲೂರು ಕಸದ ಘಟಕಕ್ಕೆ ಕಳಿಸಲಾಗುತ್ತಿದ್ದು ಘಟಕಕ್ಕೆ ಕಳಿಸುವ ಮುನ್ನ ಮೂರು ಹಂತದಲ್ಲಿ ಕಸ ವಿಂಗಡನೆ ಆಗಬೇಕು ಆಗ ಮಾತ್ರ ಕಸ ಘಟಕದಲ್ಲಿ ಸರಿಯಾದ ರೀತಿಯಲ್ಲಿ ಕಸ ವಿಂಗಡಣೆ ಮಾಡಲು ಸಾಧ್ಯವಾಗುತ್ತದೆ ಈ ಹಂತದಲ್ಲಿ ಹಸಿ ಕಸ, ಒಣ ಕಸ, ಅಪಾಯಕಾರಿ ಕಸಗಳ ಬಗ್ಗೆ ಸಾರ್ವಜನಿಕರಿಗೆ, ಅಂಗಡಿ ಮಾಲೀಕರಿಗೆ ವ್ಯಾಪಾರಸ್ಥರಿಗೆ ಮೊದಲ ಹಂತದಲ್ಲೇ ತಿಳಿಸಿದರೆ ಕಸಗಳು ಸರಿಯಾಗಿ ವಿಂಗಡಣೆಯಾಗಿ ಕಸದ ಘಟಕಕ್ಕೆ ತಲುಪುವಾಗ ಸರಿಯಾಗಿ ರೀತಿಯಲ್ಲಿ ಕಸ ನಿರ್ವಹಣೆ ಮಾಡಬಹುದು ಈ ಹಿನ್ನೆಲೆಯಲ್ಲಿ ಐಎಎಸ್‌ಸಿ ಪೀಪಲ್ ಫೌಂಡೇಶನ್ ನೊಂದಿಗೆ ಪುರಸಭೆ ಒಡಂಬಡಿಕೆ ಮಾಡಿಕೊಂಡಿದ್ದು ಮಾಗಡಿಯನ್ನು ಕಸಮುಕ್ತ ನಗರವಾಗಿ ಮಾಡುವ ನಿಟ್ಟಿನಲ್ಲಿ ನಡ್ ತಾನ್ -2025 ಪೈಲೆಟ್ ಪ್ರಾಜೆಕ್ಟ್ ಆಗಿ ತೆಗೆದುಕೊಂಡಿರುವುದರಿಂದ 83ಕ್ಕೂ ಹೆಚ್ಚು ವಿವಿಧ ಕಾಲೇಜು ವಿದ್ಯಾರ್ಥಿಗಳು ಇಲ್ಲಿ 90 ದಿನಗಳ ಕಾಲ ಕಸ ನಿರ್ವಹಣೆ ಬಗ್ಗೆ ಅಧ್ಯಯನದ ಮಾಡಿ ಅದನ್ನು ಸಲ್ಲಿಸಲಾಗುತ್ತದೆ ಯಾವುದು ಉತ್ತಮ ಎಂಬುದರ ಬಗ್ಗೆ ತಿಳಿದು ಅದನ್ನು ಅನುಷ್ಠಾನಕ್ಕೆ ತರುವ ಕೆಲಸ ಮಾಡಿ ಕಸಮುಕ್ತ ಮಾಗಡಿಯಾಗಿ ಮಾಡುವ ಕೆಲಸ ಆಗಲಿದೆ ಇದಕ್ಕಾಗಿ ಪುರಸಭೆಯವರು ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸಹಕಾರ ಸಲಹೆ ನೀಡುತ್ತೇವೆ ಎಂದು ತಿಳಿಸಿದರು.
ಪೀಪಲ್ ಫೌಂಡೇಶನ್ ಮುಖ್ಯ ಅಧಿಕಾರಿ ಮಹೇಶ್ ಮಾತನಾಡಿ, ಭಾರತೀಯ ವಿಜ್ಞಾನ ಸಂಸ್ಥೆ ಪೀಪಲ್ ಫೌಂಡೇಶನ್ ಹಾಗೂ ವಿವಿಧ ಕಾಲೇಜು ವಿದ್ಯಾರ್ಥಿಗಳ ಸಹಯೋಗದೊಂದಿಗೆ ಮಾಗಡಿ ಪಟ್ಟಣವನ್ನು ಕಸಮುಕ್ತ ನಗರವಾಗಿ ಮಾಡುವ ನಿಟ್ಟಿನಲ್ಲಿ 90 ದಿನಗಳ ವಿಶೇಷ ಅಧ್ಯಯನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇಂದು ಮೊದಲ ದಿನ ವಿದ್ಯಾರ್ಥಿಗಳು ಪ್ರತಿ ವಾರ್ಡ್ ಗಳಿಗೆ, ಮಾರುಕಟ್ಟೆಗೆ, ಸಾರ್ವಜನಿಕ ಅಂಗಡಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಅಧ್ಯಯನ ಮಾಡಿ 90 ದಿನಗಳ ಕಾಲ ಯಾವ ರೀತಿ ಕಸ ಮುಕ್ತವಾಗಿ ಮಾಡುವ ನಿಟ್ಟಿನಲ್ಲಿ ಒಂದು ಸಮಗ್ರ ಮಾಹಿತಿವುಳ್ಳ ಪ್ರಾಜೆಕ್ಟ್ ತಯಾರಿಸಿ ನಮಗೆ ಸಲ್ಲಿಸುತ್ತಾರೆ ನಾವು ಅದರಲ್ಲಿ ಯಾವುದು ಅತ್ಯುತ್ತಮ ಎಂಬುದನ್ನು ಗುರುತಿಸಿ ಅದನ್ನು ಅನುಷ್ಠಾನಕ್ಕೆ ತರುವ ಕೆಲಸ ಮಾಡಲಾಗತ್ತಿದ್ದು ಇದಕ್ಕಾಗಿ 83 ವಿದ್ಯಾರ್ಥಿಗಳು ಈ ಅಧ್ಯಯನದಲ್ಲಿ ಪಾಲ್ಗೊಳ್ಳದಲ್ಲಿದ್ದು ವಿವಿಧ ಹಂತದಲ್ಲಿ 90 ದಿನಗಳ ಕಾಲ ಮಾಹಿತಿ ಸಂಗ್ರಹಿಸಿ ಪುರಸಭೆಗೆ ಕೊಡುವ ಕೆಲಸ ಮಾಡುತ್ತೇವೆ ಈ ಮೂಲಕ ಇನ್ನು ಮೂರು ವರ್ಷದಲ್ಲಿ ಸುಂದರ ನಗರ ಮಾಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆಯಲಿದ್ದು ಇದಕ್ಕೆ ಸಾರ್ವಜನಿಕರು ಸಹಕಾರ ಕೊಡಬೇಕು ನಮ್ಮ ನಗರ ಸ್ವಚ್ಛ ಸ್ವಸ್ಥ ನಗರವಾಗಿ ಮಾಡುವ ನಿಟ್ಟಿನಲ್ಲಿ ಎಲ್ಲರ ಬೆಂಬಲ ಅಗತ್ಯವಾಗಿದೆ ಎಂದು ತಿಳಿಸಿದರು.
ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪುರಸಭೆಯ ಪೌರಕಾರ್ಮಿಕರ ಜತೆ ಪಟ್ಟಣದ 23 ವಾರ್ಡ್ ಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸುವುದಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಇದೇ ವೇಳೆ ಪುರಸಭೆ ಅಧ್ಯಕ್ಷರಾದ ಶಿವರುದ್ರಮ್ಮ ವಿಜಯ್ ಕುಮಾರ್, ಉಪಾಧ್ಯಕ್ಷರಾದ ರಿಯಾಜ್ ಅಹಮದ್, ಪರಿಸರ ಅಭಿಯಂತರಾದ ನಮಸ್ಕೃತ, ಇಂಜಿನಿಯರ್ ಪ್ರಶಾಂತ್ ಶೆಟ್ಟಿ, ಹೆಲ್ತ್ ಇನ್ಸ್ಪೆಕ್ಟರ್ ಶಿವಕುಮಾರ್, ಆರ್ ಐ ರವಿಕುಮಾರ್, ಸಿಬ್ಬಂದಿಗಳಾದ ಹನುಮಯ್ಯ, ರೋಹಿತ್, ನಾಗರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.