ADVERTISEMENT

ಮಾಗಡಿ ಅಭಿವೃದ್ಧಿಗೆ ಸಹಕಾರ ನೀಡಿ: ಶಾಸಕ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 6:25 IST
Last Updated 13 ಫೆಬ್ರುವರಿ 2026, 6:25 IST
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಾಲಕೃಷ್ಣ
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಾಲಕೃಷ್ಣ   

ಮಾಗಡಿ: ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಸ್ವಂತಕ್ಕಾಗಿ ಅಲ್ಲ; ಸಹಕಾರ ನೀಡಿ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಭವನ ಮತ್ತು ಬಡವರಿಗಾಗಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಕೆಲವರು ಇಲ್ಲ ಸಲ್ಲದ ಟೀಕೆ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ವರದಿಯಂತೆ ಬೆಲೆ ಬಾಳುವ ಮರಗಳಿಲ್ಲ. ತಡೆದವರಿಗೆ ನ್ಯಾಯಾಲಯವೇ ಛೀಮಾರಿ ಹಾಕಲಿದೆ. ತಾಲ್ಲೂಕು ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ವೈದ್ಯರಿಲ್ಲದ ಸಮಸ್ಯೆ ಬಗ್ಗೆ ಹರ್ಷ ಗುಪ್ತಾ ಅವರಿಗೆ ಮನವಿ ಮಾಡಿದ್ದು, ಶೀಘ್ರ ಪರಿಹಾರದ ಭರವಸೆ ಇದೆ ಎಂದರು.

ಬಜೆಟ್‌ನಲ್ಲಿ ವಿಶೇಷ ಅನುದಾನ: ಸೋಮೇಶ್ವರ ದೇವಸ್ಥಾನಕ್ಕೆ ₹5-10 ಕೋಟಿ, ಕೆಂಪಾಪುರದ ಕೆಂಪೇಗೌಡ ಸಮಾಧಿ ಅಭಿವೃದ್ಧಿಗೆ ₹30-40 ಕೋಟಿ, ತಾಲ್ಲೂಕು ಕಚೇರಿ ಹೊಸ ಕಟ್ಟಡಕ್ಕೆ ₹16 ಕೋಟಿ ಅನುದಾನ ಸಿಗಲಿದೆ. ಇನ್ನೊಂದು ವಾರದಲ್ಲಿ ₹103 ಕೋಟಿ ವೆಚ್ಚದ ಕೋಟೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸಿಗಲಿದೆ ಎಂದರು.

ADVERTISEMENT

ಗೌರಮ್ಮನಕೆರೆಗೆ ಹೇಮಾವತಿ ನೀರು: ಆರು ತಿಂಗಳಲ್ಲಿ ಹೇಮಾವತಿ ಪೈಪ್‌ಲೈನ್‌ ಮೂಲಕ ಗೌರಮ್ಮನಕೆರೆ ತುಂಬಿಸಿ ಅಂತರ್ಜಲ ಹೆಚ್ಚಿಸಲಾಗುವುದು. ಪಟ್ಟಣದಲ್ಲಿ 16 ಹೊಸ ಬೋರ್ವೆಲ್ ಕೊರೆಸಲಾಗಿದೆ. ಹೊಂಬಾಳಮ್ಮನಕೆರೆ ಅಭಿವೃದ್ಧಿ, ಎರಡು ತಿಂಗಳಲ್ಲಿ ಪಟ್ಟಣದ ಸಂಪೂರ್ಣ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅಭಿವೃದ್ಧಿಗೆ ವಿರೋಧಿಸದೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಮಾಗಡಿ : ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದು ನನ್ನ ಸ್ವಂತಕ್ಕಾಗಿ ಅಭಿವೃದ್ಧಿ ಮಾಡುತ್ತಿಲ್ಲ ಮಾಗಡಿ ಸುಂದರವಾಗಿ ಕಾಣಬೇಕೆ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡುತ್ತಿದ್ದೇನೆ ನಾನು ಸರ್ಅಕರಿ ಜಮೀನು ಕಬಳಿಸಿ ಕೊಂಡರೆ ನನ್ನ ಸ್ವಂತ ಮನೆ ಕಟ್ಟಿಕೊಳ್ಳುತ್ತಿದ್ದಾರೆ ವಿರೋಧ ಮಾಡಲಿ ಅದನ್ನು ಬಿಟ್ಟು ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ದು ಅಭಿವೃದ್ಧಿಗೆ ವಿರೋಧ ಮಾಡುತ್ತಿದ್ದಾರೆ ಈಗ ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುತ್ತಿದ್ದು ಬೆಲೆಬಾಳುವ ಮರಗಳು ಇದೆ ಎಂದು ನ್ಯಾಯಕ್ಕೆ ತಪ್ಪು ಸಂದೇಶ ಕೊಟ್ಟಿದ್ದಾರೆ ನಾವು ಕೂಡ ಅರಣ್ಯ ಇಲಾಖೆಯಿಂದ ಬೆಲೆಬಾಳುವ ಮರ ಇಲ್ಲ ಎಂಬ ವರದಿಯನ್ನು ಕೊಟ್ಟಿದ್ದು ಯಾರು ಇದಕ್ಕೆ ತಡೆ ತಂದಿದ್ದಾರೋ ಅವರಿಗೆ ಚೀಮಾರಿಯನ್ನು ನ್ಯಾಯಾಲಯವೇ ಹಾಕಲಿದೆ ಬಡವರಿಗಾಗಿ ಸುಸರ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದ್ದು ಕೆಂಪೇಗೌಡ ಪ್ರತಿಮೆ ಇದೆ ಎಂದು ವಿರೋಧ ಮಾಡಲಾಗುತ್ತಿದ್ದಾರೆ ಬಡವರಿಗೆ ಉತ್ತಮ ಆರೋಗ್ಯ ಸಿಗುವ ನಿಟ್ಟಿನಲ್ಲಿ ಈ ಕೆಲಸ ಮಾಡುತ್ತಿದ್ದೇನೆ ಇದಕ್ಕೆ ವಿರೋಧ ಮಾಡಿದರೆ ಹೇಗೆ? ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ವೈದ್ಯರು ಇಲ್ಲ ಎಂಬುದು ಗಮನಕ್ಕೆ ಬಂದಿದ್ದು ಇದನ್ನು ಸರಿಪಡಿಸುವಂತೆ ಹರ್ಷ ಗುಪ್ತರವರಿಗೆ ಹೇಳಿದ್ದು ಇನ್ನೂ ಸ್ವಲ್ಪ ದಿನದಲ್ಲೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದರು.

ಬಜೆಟ್ ನಲ್ಲಿ ತಾಲ್ಲೂಕಿಗೆ ವಿಶೇಷ ಅನುದಾನ : ಈ ಬಾರಿಯ ಬಜೆಟ್ ನಲ್ಲಿ ತಾಲ್ಲೂಕಿಗೆ ವಿಶೇಷ ಅನುದಾನ ಸಿಗಲಿದ್ದು ಸೋಮೇಶ್ವರ ದೇವಸ್ಥಾನಕ್ಕೆ ₹ 5 ರಿಂದ ₹10 ಕೋಟಿ‌ ಅನುದಾನ ಬಿಡುಗಡೆ ಮಾಡಿಸುವ ಭರವಸೆ ಡಿ.ಕೆ.ಸುರೇಶ್ ರವರು ಕೊಟ್ಟಿದ್ದಾರೆ ಜತೆಗೆ ಕೆಂಪಾಪುರದ ಕೆಂಪೇಗೌಡ ಸಮಾಧಿ ಅಭಿವೃದ್ಧಿಗೆ ₹30 ರಿಂದ ₹40 ಕೋಟಿ ಅನುದಾನ ಸಿಗಲಿದ್ದು ತಾಲ್ಲೂಕು ಕಚೇರಿ ಹೊಸ ಕಟ್ಟಡ ಕಟ್ಟಲು ₹16 ಕೋಟಿ ಅನುದಾನ ಬಿಡುಗಡೆಯಾಗಲಿದ್ದು ಈ ಬಾರಿಯ ಬಜೆಟ್ ನಲ್ಲಿ ಸಾಕಷ್ಟು ಅನುದಾನ ಸಿಗಲಿದೆ ಬಜೆಟ್ ಬಿಟ್ಟು ಸರ್ಕಾರದಿಂದ ಹೆಚ್ಚಿನ ಅನುದಾನ ತರಲಾಗುತ್ತಿದ್ದು ಇನ್ನೊಂದು ವಾರದಲ್ಲಿ ₹ 103 ಕೋಟಿ ವೆಚ್ಚದಲ್ಲಿ ಕೋಟೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸಿಗಲಿದೆ ಇದಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.

ಗೌರಮ್ಮನಕೆರೆಗೆ ಹೇಮಾವತಿ ನೀರು : ಪಟ್ಟಣದ ಗೌರಮ್ಮನ ಕೆರೆ ಅಭಿವೃದ್ಧಿ ಮಾಡಲಾಗುತ್ತಿದ್ದು ಈಗ ಕೆರೆ ನೀರನ್ನು ಹೊರ ತೆಗೆಯಲಾಗಿದ್ದು ಇದರಿಂದ ಅಂತರ್ಜಲ ಸಮಸ್ಯೆ ಕಾಡುತ್ತಿದ್ದು ಇನ್ನೂ ಆರು ತಿಂಗಳ ಒಳಗೆ ಹೇಮಾವತಿ ಪೈಪ್ಲೈನ್ ಮೂಲಕ ಗೌರಮ್ಮನ ಕೆರೆ ನೀರು ತುಂಬಿಸಿ ಅಂತರ್ಜಲ ಹೆಚ್ಚಿಸುವ ಕೆಲಸ ಮಾಡಲಾಗುತ್ತದೆ ಪಟ್ಟಣದಲ್ಲಿ ನೀರಿನ ಸಮಸ್ಯೆ ಆಗದಂತೆ ಹೊಸ 16 ಬೋರ್ ವೆಲ್ ಕೊರಿಸಲು ತಿಳಿಸಲಾಗಿದ್ದು ಮಂಚನಬೆಲೆ ಜಲಾಶಯದಿಂದಲೂ ನೀರು ಈಗ ಬರುತ್ತಿದ್ದು ಬೇಸಿಗೆಯಲ್ಲಿ ನೀರಿನ ಸಮಸ್ಯೆ ಬರದಂತೆ ಎಚ್ಚರ ವಹಿಸಲಾಗಿದೆ ಗೌರಮ್ಮನಕೆರೆ ಅಭಿವೃದ್ಧಿ ಮಾದರಿಯಲ್ಲೇ ಹೊಂಬಾಳಮ್ಮನಕೆರೆ ಅಭಿವೃದ್ಧಿ ಮಾಡಲಾಗುತ್ತಿದ್ದು ಇನ್ನೆರಡು ತಿಂಗಳಲ್ಲಿ ಮಾಗಡಿ ಪಟ್ಟಣದ ಸಂಪೂರ್ಣ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಸುಂದರ ಪಟ್ಟಣವಾಗಿ ಮಾಡಲಾಗುತ್ತದೆ ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸದೆ ಸಾಕಾರವನ್ನು ಸಾರ್ವಜನಿಕರು ನೀಡಬೇಕು ಎಂದು ಬಾಲಕೃಷ್ಣ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.