ADVERTISEMENT

ಮಾಗಡಿ: ಬೋನಿಗೆ ಬಿದ್ದ ಚಿರತೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 15:14 IST
Last Updated 29 ಜೂನ್ 2020, 15:14 IST
ಭಂಟರಕಪ್ಪೆ ಬಳಿ ಸೆರೆಯಾದ ಚಿರತೆ
ಭಂಟರಕಪ್ಪೆ ಬಳಿ ಸೆರೆಯಾದ ಚಿರತೆ   

ಮಾಗಡಿ:ತಾಲ್ಲೂಕಿನ ಬೆಳಗುಂಬ ಗ್ರಾಮಪಂಚಾಯಿತಿ ವ್ಯಾಪ್ತಿಯ ಭಂಟರ ಕುಪ್ಪೆ ಗ್ರಾಮದಲ್ಲಿಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಭಾನುವಾರ ಬೆಳಿಗ್ಗೆ ಚಿರತೆ ಸೆರೆಯಾಗಿದೆ.

ಸುಮಾರು 3 ವರ್ಷ ವಯಸ್ಸಾಗಿದ್ದು, ಹೆಣ್ಣು ಚಿರತೆಯಾಗಿದೆ. ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದುವಲಯ ಅರಣ್ಯ ಅಧಿಕಾರಿ ಪುಷ್ಪಲತಾ ತಿಳಿಸಿದರು.

ಉಪವಲಯ ಅರಣ್ಯ ಅಧಿಕಾರಿ ಚಿದಾನಂದ್, ಅರಣ್ಯ ರಕ್ಷಕರಾದ ಸಿದ್ದರಾಜು ಆಂಜನಮೂರ್ತಿ, ಚಂದ್ರಶೇಖರ್‌, ಉಮೇಶ್ ನಾಯ್ಕ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.