ಮಾಗಡಿ: ಇಲ್ಲಿನ ಕೋಟೆ ಮೈದಾನದಿಂದ ಭಾನುವಾರ ಪಥಸಂಚಲನ ನಡೆಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎ.ಎಚ್.ಬಸವರಾಜು, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದರು.
‘ಆರ್.ಎಸ್.ಎಸ್ ಸ್ಥಾಪನೆಯಾದಾಗ ಪ್ರಿಯಾಂಕ್ ಖರ್ಗೆ ಹುಟ್ಟಿರಲಿಲ್ಲ. ಅವರ ತಂದೆಯಿಂದಲೂ ಆರ್.ಎಸ್.ಎಸ್ ನಿಷೇಧ ಮಾಡಲಾಗಿಲ್ಲ. ಕಾಂಗ್ರೆಸ್ ಅನ್ನೇ ದೇಶದಲ್ಲಿ ಏಕೆ ನಿಷೇಧ ಮಾಡಬಾರದು’ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಈಚೆಗೆ ಪ್ರಶ್ನಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ರಾಜ್ಯದ ಜನರ ಕ್ಷಮೆ ಕೋರಬೇಕು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ರಾಜ್ಯದಲ್ಲಿ 30 ಸ್ಥಾನವೂ ಸಿಗುವುದಿಲ್ಲ ಎಂದು ಟೀಕಿಸಿದರು.
ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯ ಘಟಕದ ಎಚ್.ಎಂ.ಕೃಷ್ಣಮೂರ್ತಿ, ಬಿಜೆಪಿ ಹಿರಿಯ ಮುಖಂಡ ಪ್ರಸಾದ್ ಗೌಡ ಮಾತನಾಡಿದರು.
ನೂರಾರು ಗಣವೇಷಧಾರಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು. ಕೋಟೆ ಮೈದಾನದಿಂದ ಪ್ರಾರಂಭವಾದ ಮೆರವಣಿಗೆ ನಗರದ ಮುಖ್ಯ ರಸ್ತೆಗಳ ಮೂಲಕ ಮತ್ತೆ ಕೋಟೆ ಮೈದಾನಕ್ಕೆ ತಲುಪಿತು. ಜನರು ಹೂವು ಚೆಲ್ಲಿ ಸ್ವಾಗತಿಸಿದರು. ಪೊಲೀಸರು ಭದ್ರತೆ ಏರ್ಪಡಿಸಿದ್ದರು.
ಮಾಗಡಿ : ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ ಖರ್ಗೆ ರವರು ಆರ್ ಎಸ್ ಎಸ್ ಸ್ಥಾಪನೆ ಆದಾಗ ಅವರಿನ್ನೂ ಹುಟ್ಟೇ ಇರಲಿಲ್ಲ ಆರ್ ಎಸ್ ಎಸ್ ನಿಷೇಧ ಮಾಡಲು ಅವರ ತಂದೆಯಿಂದಲೂ ಕೂಡ ಆಗಿಲ್ಲ ಏಕೆ ಕಾಂಗ್ರೆಸ್ ಪಕ್ಷವನ್ನೇ ದೇಶದಲ್ಲಿ ನಿಷೇಧ ಮಾಡಬಾರದು ಎಂದು ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎ.ಎಚ್. ಬಸವರಾಜು ಹೇಳಿದರು.
ಪಟ್ಟಣದ ಕೋಟೆ ಮೈದಾನದಲ್ಲಿ ಭಾನುವಾರ ಆರ್ ಎಸ್ ಎಸ್ ಗೆ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗಣವೇಶಧರಿಸಿ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರ್ ಎಸ್ ಎಸ್ ಗೆ ತನ್ನದೇ ಆದ ಹಿನ್ನೆಲೆಯನ್ನು ಹೊಂದಿದೆ ದೇಶಭಕ್ತಿ ಹಿನ್ನೆಲೆಯಿಂದ ಸ್ಥಾಪನೆ ಆಗಿರುವ ಸಂಘವು 100 ವರ್ಷ ಪೂರೈಕೆಯಾಗಿದ್ದು ಹಿಂದೆ ಆರ್ ಎಸ್ ಎಸ್ ನಿಷೇದ ಮಾಡಿದಾಗ ಸುಪ್ರೀಂ ಕೋರ್ಟ್ ನಿಷೇಧ ಮಾಡಲು ಬರುವುದಿಲ್ಲ ಎಂದು ಆದೇಶ ಕೊಟ್ಟಿದೆ ಇದನ್ನು ಪ್ರಿಯಾಂಕ ಖರ್ಗೆ ರವರು ತಿಳಿಯಬೇಕು ನ್ಯಾಯಾಧೀಶರಾಗಿದ್ದ ಸಂತೋಷ್ ಹೆಗಡೆ ರವರು ಏಕೆ ಕಾಂಗ್ರೆಸ್ ಪಕ್ಷವನ್ನೇ ನಿಷೇಧ ಮಾಡಬಾರದೆಂದು ಹೇಳಿದ್ದಾರೆ ನಮ್ಮ ದೇಶದ ಕಾನೂನಿನ ಬಗ್ಗೆ ಪ್ರಿಯಾಂಕ ಖರ್ಗೆ ರವರು ಸರಿಯಾಗಿ ತಿಳಿದುಕೊಳ್ಳಬೇಕು ಒಂದು ಸಂಘಟನೆಯನ್ನು ಕಟ್ಟಿಹಾಕಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ನಾವು ಈಗ ನಡೆಸುತ್ತಿರುವ ಪಥ ಸಂಚಲನಕ್ಕೆ ಯಾವುದೇ ಅನುಮತಿ ಪಡೆದಿಲ್ಲ ತಾಕತ್ತಿದ್ದರೆ ಪ್ರಿಯಾಂಕ ಖರ್ಗೆ ರವರು ಈ ಪಥ ಸಂಚಲವನ್ನು ಮುಟ್ಟಲಿ ಪರಿಣಾಮ ಏನಾಗುತ್ತದೆ ಎಂಬುದು ಗೊತ್ತಾಗುತ್ತದೆ ಬೆದರಿಕೆ ಕರೆ ಎಂದು ತಮ್ಮವರಿಂದಲೇ ಮಾತನಾಡಿಸಿ ಸಿಂಪತಿ ಪಡೆಯಲು ಪ್ರಿಯಾಂಕ ಖರ್ಗೆ ರವರು ಹೊರಟಿದ್ದಾರೆ ಕೂಡಲೇ ರಾಜ್ಯದ ಜನತೆ ಮುಂದೆ ಕ್ಷಮೆಯಾಚನೆ ಮಾಡಿಬೇಕು ಅವರ ತಂದೆ ಬಳಿ ಹೋಗಿ ಇನ್ನು ಮುಂದೆ ಆರ್ ಎಸ್ ಎಸ್ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿಕೆ ಕೊಡಬೇಕು ಆರ್ ಎಸ್ ಎಸ್ ಸಂಸ್ಕೃತಿ ದೇಶ ಕಾಯುವುದು ಕಾಂಗ್ರೆಸ್ ಸಂಸ್ಕೃತಿ ಏನೆಂಬುದು ರಾಜ್ಯದ ಜನತೆಗೆ ತಿಳಿಯುತ್ತಿದೆ ಈ ಬಾರಿ ಆರ್ ಎಸ್‌ಎಸ್ ಅನ್ನು ಕೆಣಕಿದ್ದು 2028ರಲ್ಲಿ ಜನಗಳೇ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ಬಾರಿ ಕಾಂಗ್ರೆಸ್ 30 ಸ್ಥಾನ ಬರಲ್ಲ : ಕೊಲೆ ಬೆದರಿಕೆ ಹಾಕುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ ಮಂಗಳೂರಿನಲ್ಲಿ ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿರುವುದು ಯಾರು ಎಂಬುದು ಗೊತ್ತಿದೆ ಆರ್ ಎಸ್ ಎಸ್ ಯನ್ನು ಕಾಂಗ್ರೆಸ್ ಪಕ್ಷಕ್ಕೆಣಕ್ಕಿದ್ದು ಮುಂದಿನ ಚುನಾವಣೆಯಲ್ಲಿ 30 ಸ್ಥಾನ ಕೂಡ ರಾಜ್ಯದಲ್ಲಿ ಬರುವುದಿಲ್ಲ ಎಂದು ಎ.ಎಚ್.ಬಸವರಾಜು ಭವಿಷ್ಯ ನುಡಿದರು.
ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.
ಕೃಷ್ಣಮೂರ್ತಿ ಮಾತನಾಡಿ, ದೇಶಭಕ್ತಿ ಹೊಂದಿರುವ ಆರ್ ಎಸ್ ಎಸ್ ಸಂಘಟನೆಯೂ ಹಿಂದೂ ಸಂಘಟನೆಯಾಗಿದ್ದು ದೇಶದಲ್ಲಿ ಯಾವುದೇ ಪರಿಸ್ಥಿತಿ ಬಂದರೂ ಮೊದಲ ಸಾಲಿನಲ್ಲಿ ನಿಲ್ಲುವುದು ಆರ್ ಎಸ್ ಎಸ್ ಇಂತಹ ಸಂಸ್ಥೆಗೆ ನೂರು ವರ್ಷ ಪೂರೈಕೆಯಾಗಿದ್ದು ದೇಶ ಭಕ್ತಿಗೆ ಮೊದಲ ಆದ್ಯತೆಯನ್ನು ನೀಡುತ್ತಿದ್ದು ಆರ್‌ಎಸ್ ಎಸ್ ನ ಕಾರ್ಯ ಇದೇ ರೀತಿ ಮುಂದುವರೆಯಲಿ ನಾವೆಲ್ಲರೂ ಆರ್ ಎಸ್ ಎಸ್ ಗೆ ಬೆಂಬಲಿಸೋಣ ಎಂದು ತಿಳಿಸಿದರು.
ಬಿಜೆಪಿ ಹಿರಿಯ ಮುಖಂಡ ಪ್ರಸಾದ್ ಗೌಡ ಮಾತನಾಡಿ, ನೂರು ವರ್ಷ ಪೂರೈಕೆ ಆಗಿರುವ ಹಿನ್ನೆಲೆಯಲ್ಲಿ ಪಥ ಸಂಚಲನ ಮಾಡಲಾಗುತ್ತಿದ್ದು ಎಲ್ಲರೂ ಸ್ವಯಂ ಇಚ್ಛೆಯಿಂದ ಹೊಸ ಸಂಚನನದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಾರೆ ದೇಶಭಕ್ತಿಯೇ ಆರ್ ಎಸ್ ಎಸ್ ಗೆ ಮುಖ್ಯ ಧ್ಯಯವಾಗಿದ್ದು ದೇಶದ ಪರವಾಗಿ ನಿಲ್ಲುವ ಸಂಸ್ಥೆ ಪರವಾಗಿ ನಾವೆಲ್ಲರೂ ನಿಲ್ಲುತ್ತೇವೆ ಎಂದು ತಿಳಿಸಿದರು.
ನೂರಾರು ಗಣವೇಶಧಾರಿಗಳಿಂದ ಪಥ ಸಂಚಲನ : ಆರ್ ಎಸ್ ಎಸ್ ಗೆ ನೂರು ವರ್ಷ ಪೂರೈಕೆಯಾದ ಹಿನ್ನೆಲೆಯಲ್ಲಿ ನೂರಾರು ಗಣವೇಶಧಾರಿಗಳು ಭಾನುವಾರ ಮಾಗಡಿ ಕೋಟೆ ಮೈದಾನದಲ್ಲಿ ಪಥಸಂಚನದಲ್ಲಿ ಭಾಗವಹಿಸಿದ್ದರು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಗಣವೇಶ ಧರಿಸಿ ದಂಡ ಹಿಡಿದು ಕೋಟೆ ಮೈದಾನದಿಂದ ಕೆಂಪೇಗೌಡ ವೃತ್ತದ ಮೂಲಕ ರಾಜಕುಮಾರ ರಸ್ತೆ, ಡೂಮ್ ಲೈಟ್ ವೃತ್ತ, ಬಿಕೆ ರಸ್ತೆ ಮೂಲಕ ಕಲ್ಯಾಗೇಟ್ ವೃತ್ತದದಿಂದ ಆರ್ ಆರ್ ರಸ್ತೆ ಮೂಲಕ ಕೆರೆಬಿದಿ ಮುಖಾಂತರ ಕೋಟೆ ಮೈದಾನದ ವರೆಗೂ ಪಥಸಂಚಲನ ಮಾಡಲಾಯಿತು. ಸಾರ್ವಜನಿಕರು ಪಥಸಂಚನಕ್ಕೆ ಭರ್ಜರಿ ಸ್ವಾಗತ ಕೋರಿ ಹೂವಿನ ಸುರಿಮಳೆ ಸುರಿಸಿ ಸ್ವಾಗತ ಕೋರಲಾಯಿತು ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮಾಗಡಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧಡೆಯಿಂದ ಗಣವೇಶಧಾರಿಗಳು ಪಥಸಂಚನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.