
ಪ್ರಜಾವಾಣಿ ವಾರ್ತೆ
ಮಾಗಡಿ: ತಾಲ್ಲೂಕಿನ ಸಾವನದುರ್ಗ ವೀರಭದ್ರ ಹಾಗೂ ಭದ್ರಕಾಳಮ್ಮ ದೇವಾಲಯದಲ್ಲಿ ರಥೋತ್ಸವ ಫೆ.1 ಭಾನುವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ ಎಂದು ದೇವಸ್ಥಾನದ ಆರ್ಚಕ ಲೋಕೇಶರಾಧ್ಯ ತಿಳಿಸಿದ್ದಾರೆ.
ರಥೋತ್ಸವ ಅಂಗವಾಗಿ ವೀರಗಾಸೆ, ಪ್ರಸಾದ ವಿನಿಯೋಗ, ಮಡಿ ತೇರು, ನಂದಿ ವಾಹನೋತ್ಸವ, ಆನೆ ವಾಹನೋತ್ಸವ, ಬೆಳ್ಳಿ ಪ್ರಭಾವಳಿ ಉತ್ಸವ, ಖಡ್ಗೋತ್ಸವ, ಶರಭೋತ್ಸವ ಹಾಗೂ ಭರತನಾಟ್ಯ, ಮುತ್ತಿನ ಪಲ್ಲಕ್ಕೆ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ಡಾ.ಸಿ.ಎನ್.ಮಂಜುನಾಥ್, ಶಾಸಕ ಎಚ್.ಸಿ.ಬಾಲಕೃಷ್ಣ, ಎಚ್.ಎಂ.ರೇವಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.