
ಮಾಗಡಿ: ವರ್ಷದ ಮೊದಲ ಹಬ್ಬ ಸಂಕ್ರಾಂತಿ ಹಬ್ಬವನ್ನು ತಾಲೂಕಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಗುರುವಾರ ಬೆಳಗ್ಗೆ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು ಸಂಕ್ರಾಂತಿ ಹಬ್ಬದ ಪ್ರಯುಕ್ತ ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ವಜ್ರ ಖಚಿತ ಚಿನ್ನದ ಕಿರೀಟ ಚಿನ್ನದ ಪಾದುಕೆ ಚಿನ್ನದ ಅಭಯ ಹಸ್ತ ಹಾಗೂ ತೋಮಾಲೆ ಸೇವೆಯೊಂದಿಗೆ ರಂಗನಾಥ ಸ್ವಾಮಿಗೆ ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು ನೂರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ರಂಗನಾಥ ಸ್ವಾಮಿಯ ದರ್ಶನಾ ಪಡೆದರು ಕೆಂಪೇಗೌಡರು ತಮ್ಮ ತಾಯಿಗಾಗಿ ಕಟ್ಟಿಸಿರುವ ಪಟ್ಟಣದ ಪ್ರಸನ್ನ ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಅಭಿಷೇಕ ಪೂಜೆ ನೆರವೇರಿಸಲಾಯಿತು ವಿನಾಯಕ ಸ್ವಾಮಿ ದೇವಸ್ಥಾನ ಹೊಸಪೇಟೆ ಮುಖ್ಯರಸ್ತೆಯ ಶನೇಶ್ವರ ಅಯ್ಯಪ್ಪ ಸ್ವಾಮಿ ಅಲಂಕಾರ ಮಾಡಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು ಮಾಗಡಿ ಕುಣಿಗಲ್ ಮುಖ್ಯರಸ್ತೆಯ ಕಲ್ಯಾಗೇಟ್ ನ ಬಸವಣ್ಣ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಬಸವಣ್ಣನಿಗೆ ವಿಶೇಷ ಪೂಜೆ ಸಲ್ಲಿಸಿ ಬಂದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು, ಹೊಸಪೇಟೆಯ ಆಂಜನೇಯ ಸ್ವಾಮಿ ದೇವಸ್ಥಾನ, ಗವಿ ಗಂಗಾಧರೇಶ್ವರ ದೇವಸ್ಥಾನ, ಚಕ್ರಬಾವಿ ಕೋಡಿ ಬಸವಣ್ಣ, ಸ್ವಾಮಿ ದೇವಸ್ಥಾನ ಮರಳು ಸಿದ್ದೇಶ್ವರ ಮಠದಲ್ಲಿ ದೇಶ ಪೂಜೆ ಏರ್ಪಡಿಸಲಾಗಿತ್ತು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಉತ್ತಕ್ಕೆ ವಿಶೇಷ ಪೂಜೆ ಸಲ್ಲಿಸಿ ಹಾಲೆರೆದು ಸಂಕ್ರಾಂತಿ ಹಬ್ಬ ಆಚರಿಸಿದರು ಮಹಿಳೆಯರು ಮನೆಗಳಿಗೆ ತೆರಳಿ ಎಳ್ಳು ಬೆಲ್ಲ ಬೀರಿ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಿದರು.
ರಾಸುಗಳಿಗೆ ಕಿಚ್ಚ ಹಾಯಿಸಿದ ರೈತರು : ಸಂಕ್ರಾಂತಿ ಹಬ್ಬದ ಸಂಜೆ ವಿಶೇಷವಾಗಿ ರೈತರು ವರ್ಷವಿಡಿ ರೈತನ ಪರವಾಗಿ ದುಡಿಯುವ ರಾಶಿಗಳಿಗೆ ವಿಶೇಷ ಅಲಂಕಾರ ಮಾಡಿ ಸಂಜೆ ಬೆಂಕಿಯಲ್ಲಿ ಕಿಚ್ಚಯಿಸುವ ಮೂಲಕ ರಾಸುಗಳಿಗೆ ಒಳಿತಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು ಪಟ್ಟಣದ ಕಲ್ಯಾಗೇಟ್ ನ ಬಸವಣ್ಣ ದೇವಸ್ಥಾನ, ಹೊಸಪೇಟೆಯ ವೃತ್ತದಲ್ಲಿ ತಾಲೂಕಿನ ಚಕ್ರಬಾವಿ ಕೋಡಿ ಬಸವಣ್ಣ ಸ್ವಾಮಿ ಮುಖ್ಯ ರಸ್ತೆ ಹಾಗೂ ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ ರಾಸುಗಳನ್ನು ಬೆಂಕಿಯಲ್ಲಿ ಕಿಚ್ಚು ಹಾಯಿಸುವ ಮೂಲಕ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.