ADVERTISEMENT

ಮಣ್ಣಿ ಫಲವತ್ತತೆಗೆ ಎರೆಹುಳು ಗೊಬ್ಬರ ಬಳಸಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 13:22 IST
Last Updated 12 ಡಿಸೆಂಬರ್ 2018, 13:22 IST
ಕೆವಿಕೆಯಲ್ಲಿ ನಡೆದ ಎರೆಹುಳು ಗೊಬ್ಬರ ತಯಾರಿಕೆ ತರಬೇತಿಗೆ ನಿವೃತ್ತ ಪ್ರಾಧ್ಯಾಪಕ ಡಾ.ರಾಮಕೃಷ್ಣ ಚಾಲನೆ ನೀಡಿದರು
ಕೆವಿಕೆಯಲ್ಲಿ ನಡೆದ ಎರೆಹುಳು ಗೊಬ್ಬರ ತಯಾರಿಕೆ ತರಬೇತಿಗೆ ನಿವೃತ್ತ ಪ್ರಾಧ್ಯಾಪಕ ಡಾ.ರಾಮಕೃಷ್ಣ ಚಾಲನೆ ನೀಡಿದರು   

ಮಾಗಡಿ: ಕುರಿಗಳ ಗೊಬ್ಬರ ಮತ್ತು ಎರೆಹುಳುವಿನಿಂದ ಮಣ್ಣಿನ ಫಲವತ್ತತೆ ಕಾಪಾಡಲು ಸಾಧ್ಯ. ಇದರಿಂದ ಉತ್ತಮ ಫಸಲು ಪಡೆಯಬಹುದು ಎಂದು ನಿವೃತ್ತ ಪ್ರಾಧ್ಯಾಪಕ ಡಾ.ರಾಮಕೃಷ್ಣ ತಿಳಿಸಿದರು.

ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆರಂಭವಾದ ಆರು ದಿನಗಳ ಎರೆಗೊಬ್ಬರ ತಯಾರಿಕೆ ಕೌಶಲ ಅಭಿವೃದ್ಧಿ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಸಾಯನಿಕ ಗೊಬ್ಬರವನ್ನು ಶೇ25 ರಿಂದ 50ರಷ್ಟು ಕಡಿತಗೊಳಿಸಿ, ಎರೆಹುಳು ಗೊಬ್ಬರ ಬಳಸಿದಾಗ ದೀರ್ಘಾವಧಿವರೆಗೆ ಮಣ್ಣಿನ ಫಲವತ್ತತೆ ಕಾಪಾಡಲು ಸಾಧ್ಯ ಎಂದರು.

ADVERTISEMENT

ಕೇಂದ್ರದ ವಿಜ್ಞಾನಿ ಡಾ.ಲತಾ ಆರ್.ಕುಲಕರ್ಣಿ ಮಾತನಾಡಿ, ಉದ್ಯಮಶೀಲತೆಗಾಗಿ ಎರೆಹುಳು ಗೊಬ್ಬರದ ತಾಂತ್ರಿಕತೆ ಕುರಿತು ತರಬೇತಿದಾರರಿಗೆ ಮಾಹಿತಿ ನೀಡಲಾಗುವುದು. ತರಬೇತಿ ಸೌಲಭ್ಯ ಬಳಸಿಕೊಳ್ಳಲು ಸಲಹೆ ನೀಡಿದರು.

ಮಣ್ಣು ವಿಜ್ಞಾನಿ ಪ್ರೀತು, ಬೇಸಾಯಶಾಸ್ತ್ರದ ವಿಜ್ಞಾನಿ ಡಾ.ದಿನೇಶ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.