ರಾಮನಗರ: ಇಲ್ಲಿನ ಬಸವನಪುರ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದ ರಾಮನಗರ ಮ್ಯಾರಥಾನ್ ನಲ್ಲಿ ಸಾವಿರಾರು ಮಂದಿ ಹೆಜ್ಜೆ ಹಾಕಿದರು.
ಯಲ್ಲೋ ಅಂಡ್ ರೆಡ್ ಫೌಂಡೇಶನ್ ವತಿಯಿಂದ ಸತತ ಏಳನೇ ವರ್ಷ ಈ ಮ್ಯಾರಥಾನ್ ಆಯೋಜಿಸಲಾಗಿತ್ತು. 21 ಕಿ.ಮೀ, 11 ಕಿ.ಮೀ ಹಾಗು 7 ಕಿ.ಮೀ ವಿಭಾಗದಲ್ಲಿ ಓಟಗಾರರು ಹೆಜ್ಜೆ ಹಾಕಿದರು. ಮಾವಿನ ತೋಟಗಳು, ಗುಡ್ಡಗಾಡಿನ ನಡುವಿನ ಹಾದಿಯಲ್ಲಿ ಓಟ ಸಾಗಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಸಕ್ತರು ಪಾಲ್ಗೊಂಡರು. ರಾಮನಗರ ಎಸ್ಪಿ ಅನೂಪ್ ಶೆಟ್ಟಿ, ಜಿ.ಪಂ. ಸಿಇಒ ಇಕ್ರಂ ಹಾಗೂ ಬಿಜೆಪಿ ಮುಖಂಡ ಅಶ್ವತ್ಥ ನಾರಾಯಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.