ADVERTISEMENT

ರಾಮನಗರ: ₹20 ಸಾವಿರ ಲಂಚ- ಮಧ್ಯವರ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 15:41 IST
Last Updated 3 ಜನವರಿ 2023, 15:41 IST
   

ರಾಮನಗರ: ಪ್ರಕರಣವೊಂದನ್ನು ಇತ್ಯರ್ಥ ಮಾಡಿಸುವುದಾಗಿ ಹೇಳಿಕೊಂಡು ₹20 ಸಾವಿರ ಲಂಚ ಪಡೆಯುತ್ತಿದ್ದ ಮಧ್ಯವರ್ತಿ ಮಂಜುನಾಥ ಎಂಬಾತನನ್ನು ಲೋಕಾಯುಕ್ತ ಪೊಲೀಸರು ಮಾಗಡಿಯಲ್ಲಿ ಮಂಗಳವಾರ ಬಂಧಿಸಿದ್ದಾರೆ.

ಸೋಲೂರು ಹೋಬಳಿಯ ಇರ್ಫಾನ್‌ ಮತ್ತು ಇತರರ ವಿರುದ್ಧ ಮಾಗಡಿ ತಾಲ್ಲೂಕು ಕಚೇರಿಯಲ್ಲಿ ದಾಖಲಾಗಿರುವ ಕಲಂ 107 ಸಿಆರ್‌ಪಿಸಿ ಪ್ರಕರಣವನ್ನು ಮಾಗಡಿ ತಹಶೀಲ್ದಾರ್‌ಗೆ ಹೇಳಿ ಮುಕ್ತಾಯ ಮಾಡಿಸುವುದಾಗಿ ಆರೋಪಿ ಭರವಸೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ₹1 ಲಕ್ಷ ಲಂಚ ಕೇಳಿದ್ದರು. ಕಡೆಗೆ ₹60 ಸಾವಿರಕ್ಕೆ ಒಪ್ಪಿದ್ದರು.

ಇದನ್ನು ಇರ್ಫಾನ್ ಲೋಕಾಯುಕ್ತ ಪೊಲೀಸರ ಗಮನಕ್ಕೆ ತಂದಿದ್ದರು. ಅವರ ಸೂಚನೆಯಂತೆ ಮಂಗಳವಾರ ಸಂಜೆ ಮಾಗಡಿ ತಾಲ್ಲೂಕು ಕಚೇರಿ ಆವರಣದಲ್ಲಿ ₹20 ಸಾವಿರ ಲಂಚ ನೀಡುತ್ತಿದ್ದ ವೇಳೆ ರಾಮನಗರ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆಯಿತು. ಆರೋಪಿ ವಿರುದ್ಧ ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 1988 ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.