ಹೊಂಬಮ್ಮ
ಹಾರೋಹಳ್ಳಿ: ಓದಿಗೆ ತಕ್ಕ ಕೆಲಸ ಸಿಗದ ಕಾರಣ ಯುವಕನೊಬ್ಬ ಈಚೆಗೆ ಬೆಳ್ತಂಗಡಿ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದ. ಮಗನ ಸಾವಿನಿಂದ ಮನನೊಂದ ತಾಯಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾರೋಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ಹಾರೋಹಳ್ಳಿ ಜನತಾ ಕಾಲೊನಿ ನಿವಾಸಿ ಹೊಂಬಮ್ಮ (57) ಮೃತರು. ಅವರಿಗೆ ಪತಿ ಹಾಗೂ ಪುತ್ರಿ ಇದ್ದಾರೆ.
ಅರುಣ್ ಕುಮಾರ್
ಮಗನ ಸಾವಿನ ಸುದ್ದಿಯಿಂದ ಕುಗ್ಗಿದ್ದ ಹೊಂಬಮ್ಮ, ಕಂಪನಿಯೊಂದರಲ್ಲಿ ಸ್ವಚ್ಛತಾ ಕೆಲಸಗಾರರಾಗಿದ್ದು ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.