ADVERTISEMENT

15ಕ್ಕೆ ಯೋಗ ಮುನೇಶ್ವರ ಸ್ವಾಮಿ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2025, 16:03 IST
Last Updated 11 ಮಾರ್ಚ್ 2025, 16:03 IST

ಮಾಗಡಿ: ಜೋಡಗಟ್ಟೆ ಗ್ರಾಮದಲ್ಲಿ ನೆಲಸಿರುವ ಯೋಗ ಮುನೇಶ್ವರ ಸ್ವಾಮಿ 22ನೇ ವಾರ್ಷಿಕೋತ್ಸವ ಮಾರ್ಚ್‌ 15ರಂದು ನಡೆಯಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ರಾಣೋಜಿರಾವ್ ತಿಳಿಸಿದರು.

ದೇವಸ್ಥಾನದ ಆವರಣದಲ್ಲಿ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಾರ್ಚ್‌ 15ರಂದು ಬೆಳಿಗ್ಗೆಯಿಂದ ವಿಶೇಷ ಪೂಜೆ, ಹೋಮಗಳು ನಡೆಯಲಿವೆ. ಸಂಜೆ 6.30ರಿಂದ ಪೂಜಾ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಸಿಡಿ ಮದ್ದುಗಳ ಪ್ರದರ್ಶನದೊಂದಿಗೆ ಯೋಗ ಮುನೇಶ್ವರ ಸ್ವಾಮಿ, ಬಸವೇಶ್ವರ ಸ್ವಾಮಿ, ಮದ್ದೂರಮ್ಮ ದೇವಿ, ದಂಡಿನ ಮಾರಮ್ಮ ದೇವಿ ಹಾಗೂ ಪಟ್ಟಲದಮ್ಮ ದೇವಿ ಮೆರವಣಿಗೆ ಹಾಗೂ ಹೂವಿನ ಆರತಿ ನಡೆಯಲಿದೆ. ಸಂಜೆ 5.30ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.

ಮಾರ್ಚ್‌ 15ರಂದು 9.30ಕ್ಕೆ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯಿಂದ ಗಂಗೆ-ಗೌರಿ ಪೌರಾಣಿಕ ನಾಟಕ ನಡೆಯಲಿದೆ. ಮಾರ್ಚ್‌ 16ರಂದು ಬೆಳಿಗ್ಗೆ 9.30 ರಿಂದ ಜೋಡಗಟ್ಟೆ ಮತ್ತು ಇರುಳಿಗರ ಕಾಲೊನಿಯಲ್ಲಿ ದೇವರ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.

ADVERTISEMENT

ಈ ವೇಳೆ ಯೋಗೇಶ್, ಧನುಬಾಯಿ, ವಿದ್ಯಾಬಾಯಿ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.