ADVERTISEMENT

ಚಾಟ್ಸ್ ಪ್ರಿಯರ ಹಾಟ್‌ ಸ್ಪಾಟ್‌: ‘ಮೈಸೂರು ಚಾಟ್ಸ್ ಸೆಂಟರ್‘

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 4:56 IST
Last Updated 14 ಏಪ್ರಿಲ್ 2024, 4:56 IST
ಕುದೂರು ಪಟ್ಟಣದ ಮೈಸೂರ್ ಚಾಟ್ಸ್ ಸೆಂಟರ್ ನಲ್ಲಿ ಚಾಟ್ಸ್ ಸರ್ವ್ ಮಾಡುತ್ತಿರುವ ಅಂಗಡಿ ಮಾಲೀಕ ನಾಗಪ್ರಸಾದ್
ಕುದೂರು ಪಟ್ಟಣದ ಮೈಸೂರ್ ಚಾಟ್ಸ್ ಸೆಂಟರ್ ನಲ್ಲಿ ಚಾಟ್ಸ್ ಸರ್ವ್ ಮಾಡುತ್ತಿರುವ ಅಂಗಡಿ ಮಾಲೀಕ ನಾಗಪ್ರಸಾದ್   

ಸಂಜೆಯಾಗುತ್ತಿದ್ದಂತೆ ಅಂಗಡಿಯಲ್ಲಿ ಜನ ಜಂಗುಳಿ ತುಂಬಿರುತ್ತದೆ. ಎಲ್ಲ ವಯೋಮಾನದ ಚಾಟ್ಸ್ ಪ್ರಿಯರಿಗೆ ಇದು ಹಾಟ್ ಸ್ಪಾಟ್.

1958ರಲ್ಲಿ ಜೀವನೋಪಯಕ್ಕಾಗಿ ಮೈಸೂರಿನಿಂದ ಬಂದ ದಿ.ಸುಬ್ರಹ್ಮಣ್ಯ ಶೆಟ್ಟಿ ಕುಟುಂಬ ಕುದೂರು ಪಟ್ಟಣದಲ್ಲಿ ಮೊದಲಿಗೆ ‘ಮೈಸೂರು ಸ್ಟೋರ್ಸ್‘ ಎಂಬ ಸ್ಟೇಷನರಿ ಅಂಗಡಿ ತೆರೆದು ಮಾಗಡಿ ತಾಲ್ಲೂಕಿನಲ್ಲಿಯೇ ಹೆಚ್ಚು ಪ್ರಸಿದ್ಧಿಯಾಗಿತ್ತು. ಕಳೆದ ಎಂಟು ವರ್ಷಗಳಿಂದ ಸ್ಟೇಷನರಿ ಅಂಗಡಿ ಜತೆಗೆ ‘ಮೈಸೂರು ಚಾಟ್ಸ್ ಸೆಂಟರ್‘ ತೆರೆದು ಜನರ ನೆಚ್ಚಿನ ಚಾಟ್ಸ್ ಸೆಂಟರ್ ಎಂದೇ ಪ್ರಸಿದ್ಧಿಯಾಗಿದೆ.

ಗ್ರಾಹಕರಿಗೆ ಉಣಬಡಿಸಲು ಸಿದ್ಧವಾಗಿರುವ ಚಾಟ್ಸ್

ಪಟ್ಟಣದ ಹಾಲಿನ ಡೇರಿ ಸಮೀಪದ ಈ ಅಂಗಡಿ ಸಂಜೆ 4ರಿಂದ ರಾತ್ರಿ 8ರವರೆಗೆ ತೆರೆದಿರುತ್ತದೆ.  ಪ್ರತಿದಿನ 250-300 ಜನರು ಭೇಟಿ ನೀಡುತ್ತಾರೆ.

ADVERTISEMENT

ಟಿಕ್ಕಿ ಪೂರಿ, ಫ್ಲೋಟಿಂಗ್ ಪಾನಿಪೂರಿ, ದಹಿಪೂರಿ, ಬನ್ ಮಸಾಲಾ, ನಿಪ್ಪಟ್ಟು ಮಸಾಲೆ, ಮಿಕ್ಸ್ ಮಸಾಲೆ, ಟೊಮೆಟೊ ಸ್ಲೈಸ್ ಸೇರಿದಂತೆ 10ಕ್ಕೂ ಹೆಚ್ಚು ಚಾಟ್ಸ್‌ ಮಾಡಿ ಕೊಡಲಾಗುತ್ತದೆ. ಇದರಲ್ಲಿ ಟಿಕ್ಕಿಪೂರಿ ಹಾಗೂ ಫ್ಲೋಟಿಂಗ್ ಪಾನಿಪೂರಿ ಇಲ್ಲಿನ ವಿಶೇಷ ಚಾಟ್ಸ್.

ಗ್ರಾಹಕರಿಗೆ ಉಣಬಡಿಸಲು ಸಿದ್ಧವಾಗಿರುವ ಚಾಟ್ಸ್

ಇದರ ಜತೆಗೆ ವಿವಿಧ ಬಗೆ ಕಷಾಯ, ಹರ್ಬಲ್ ಸೋಡಾ ಕೂಡ ಸಿಗುತ್ತದೆ. ಬಿ.ಪಿ, ಸಕ್ಕರೆ ಕಾಯಿಲೆ, ಬೊಜ್ಜು ಕರಗಿಸಲು, ಪಿತ್ತ ನಿವಾರಿಸಲು, ಜ್ಞಾಪಕ ಶಕ್ತಿ, ಜೀರ್ಣಕ್ರಿಯೆಗೆ ಕಷಾಯ ಸಹಕಾರಿ ಆಗಿದೆ ಎನ್ನುತ್ತಾರೆ ಅಂಗಡಿ ಮಾಲೀಕ ನಾಗಪ್ರಸಾದ್.

ನಾಗಪ್ರಸಾದ್ ಅಂಗಡಿ ಮಾಲೀಕ ಕುದೂರು
ಕುದೂರು ಪಟ್ಟಣದ ಮೈಸೂರ್ ಚಾಟ್ಸ್ ಸೆಂಟರ್ ನಲ್ಲಿ ಚಾಟ್ಸ್ ಸವಿಯಲು ಕಾದಿರುವ ಗ್ರಾಹಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.