ಚನ್ನಪಟ್ಟಣ: ಪಟ್ಟಣದ ಅಭ್ಯುದಯ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಬಿ.ವಿ.ಗೀತಾಂಜಲಿ ಅಭಿಲಾಷ್ ಮತ್ತು ಉಪಾಧ್ಯಕ್ಷರಾಗಿ ಎಚ್.ಬಿ.ರೂಪ ಸುಬ್ಬೇಗೌಡ ಅವರು ಆಯ್ಕೆಯಾಗಿದ್ದಾರೆ.
ಸೋಮವಾರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಬಿ.ವಿ. ಗೀತಾಂಜಲಿ ಮತ್ತು ಕಾಂಗ್ರೆಸ್ ಬೆಂಬಲಿತ ಜಯಮಾಲ, ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ರೂಪ ಸುಬ್ಬೇಗೌಡ ಮತ್ತು ಕಾಂಗ್ರೆಸ್ ಬೆಂಬಲಿತ ಕೋಕಿಲಾರಾಣಿ ನಾಮಪತ್ರ ಸಲ್ಲಿಸಿ ಕಣದಲ್ಲಿದ್ದರು.
15 ಮಂದಿ ನಿರ್ದೇಶಕರಿರುವ ಬ್ಯಾಂಕಿನ ಆಡಳಿತ ಮಂಡಳಿಗೆ ಜೆಡಿಎಸ್ ಬೆಂಬಲಿತರಾದ ಬಿ.ವಿ. ಗೀತಾಂಜಲಿ ಮತ್ತು ಎಚ್.ಬಿ. ರೂಪ 8 ಮತಗಳನ್ನು ಪಡೆದು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತರಾದ ಜಯಮಾಲ ಮತ್ತು ಕೋಕಿಲಾರಾಣಿ ಅವರು ತಲಾ 7 ಮತಗಳನ್ನು ಪಡೆದು 1 ಮತದ ಅಂತರದಿಂದ ಪರಾಭವಗೊಂಡರು.
ನಿರ್ದೇಶಕರಾದ ರೇಖಾ ಉಮಾಶಂಕರ್, ಭಾಗ್ಯ ನಾಗರಾಜ್, ಸುಕನ್ಯಾ ಎಂ.ಎನ್.ರಾಜಶೇಖರ್, ಮಧುಶ್ರಿ ಭರತ್, ಎನ್.ಪಿ ಲಕ್ಷಿ ಯಾಲಕ್ಕಿಗೌಡ, ಎಚ್.ಕೆ.ಆಶಾ ಸಿ.ಪಿ. ನಾಗೇಶ್, ನಿಂಗರಾಜಮ್ಮ ಲಕ್ಷ್ಮಿಪತಿ, ವಿ.ಪೂರ್ಣಿಮಾ ರಾಜಶೇಖರ್, ಸಿ.ಸುಷ್ಮಾ ಬಿಳಿಯಪ್ಪ, ಎಂ.ಸಾವಿತ್ರಮ್ಮ ಕೃಷ್ಣಪ್ಪ, ಕಾಳಮ್ಮ ಅವರು ಮತದಾನಲ್ಲಿ ಪಾಲ್ಗೊಂಡರು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಕೆ.ಟಿ.ಉಮೇಶ್ ಕಾರ್ಯನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.