ADVERTISEMENT

ರಾಮನಗರ: ನಿತ್ಯಾನಂದ ಸ್ವಾಮೀಜಿ ಅನುಯಾಯಿಗಳ ವಿರುದ್ಧ ಜಾಮೀನುರಹಿತ ವಾರಂಟ್

​ಪ್ರಜಾವಾಣಿ ವಾರ್ತೆ
Published 6 ಜುಲೈ 2023, 6:53 IST
Last Updated 6 ಜುಲೈ 2023, 6:53 IST

ರಾಮನಗರ: ನಿತ್ಯಾನಂದ ಸ್ವಾಮೀಜಿ ಇಬ್ಬರು ಅನುಯಾಯಿಗಳ ವಿರುದ್ಧ ಇಲ್ಲಿಯ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಜಾಮೀನು ರಹಿತ ವಾರಂಟ್ ಹೊರಡಿಸಿದೆ. 

ಭಕ್ತೆಯೊಬ್ಬರ ಮೇಲೆ ನಿತ್ಯಾನಂದ ಸ್ವಾಮೀಜಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಇಬ್ಬರು ಅನುಯಾಯಿಗಳಾದ ಪ್ರಕರಣದ ಮೂರನೇ ಆರೋಪಿ ಶಿವವಲ್ಲಭನೇನಿ ಮತ್ತು ಆರನೇ ಆರೋಪಿ ಜಮುನಾ ರಾಣಿ ವಿರುದ್ಧ ವಾರಂಟ್ ಜಾರಿಯಾಗಿದೆ.

ಈ ಇಬ್ಬರೂ ವಿಚಾರಣೆಗಾಗಿ ಕೋರ್ಟ್ ಎದುರು ಹಾಜರಾಗದೆ ನ್ಯಾಯಾಲಯದ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ ನ್ಯಾಯಾಧೀಶರು, ಇಬ್ಬರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದರು‌. ಆಗಸ್ಟ್ 5ಕ್ಕೆ ವಿಚಾರಣೆ ಮುಂದೂಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.