ADVERTISEMENT

ಪಾದಯಾತ್ರೆಗೆ ಶೀಘ್ರ ಮರುಚಾಲನೆ: ಡಿ.ಕೆ.ಸುರೇಶ್‌

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 19:45 IST
Last Updated 29 ಜನವರಿ 2022, 19:45 IST
ಡಿ.ಕೆ.ಸುರೇಶ್‌
ಡಿ.ಕೆ.ಸುರೇಶ್‌    

ರಾಮನಗರ: ರಾಜ್ಯದಲ್ಲಿ ಕೋವಿಡ್‌ ಕಡಿಮೆ ಆಗುತ್ತಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಹೀಗಾಗಿ ಪಕ್ಷದ ನಾಯಕರ ಜತೆ ಮಾತನಾಡಿ ಮೇಕೆದಾಟು ಪಾದಯಾತ್ರೆಗೆಶೀಘ್ರದಲ್ಲೇ ಮರು ಚಾಲನೆ ನೀಡಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌ ಹೇಳಿದರು.

ಇಲ್ಲಿನ ಬಸವನಪುರದಲ್ಲಿ ಶನಿವಾರ ಪತ್ರಕರ್ತರ ಜತೆ ಅವರು ಮಾತನಾಡಿದರು. ‘ಕೋವಿಡ್‌ ಹೆಚ್ಚುತ್ತಿದೆ ಎನ್ನುವ ಕಾರಣಕ್ಕೆ ಪಾದಯಾತ್ರೆ ನಿಲ್ಲಿಸಿದ್ದೆವು. ಈಗ ಪರಿಸ್ಥಿತಿ ತಿಳಿಯಾಗುತ್ತಿದ್ದು, ಫೆಬ್ರುವರಿ 20ರ ನಂತರ ಎರಡನೇ ಹಂತದ ಪಾದಯಾತ್ರೆ ಆರಂಭ ಆಗಲಿದೆ’ ಎಂದರು.

‘ಶಾಸಕರ ನಿಧಿ ಬಳಕೆ ಮಾರ್ಗಸೂಚಿ ಪರಿಷ್ಕರಣೆ’

ADVERTISEMENT

ಚಿತ್ರದುರ್ಗ: ಶಾಸಕರ ನಿಧಿಯನ್ನು ಕಾಲಮಿತಿಯಲ್ಲಿ ಬಳಕೆ ಮಾಡುವ ಹಾಗೂ ಹೊಣೆಗಾರಿಕೆ ನಿಗದಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಮಾರ್ಗಸೂಚಿ ಬದಲಾವಣೆ ಮಾಡಲಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಎನ್‌.ಮುನಿರತ್ನ ತಿಳಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ
ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ
ಅವರು, ‘ಶಾಸಕರ ನಿಧಿ ಬಳಕೆಗೆ ಸಂಬಂಧಿಸಿ ಸಾಕಷ್ಟು ತಕರಾರು
ಗಳು ಬರುತ್ತಿವೆ. ನಿಗದಿತ
ಆರ್ಥಿಕ ವರ್ಷದಲ್ಲಿ
ಅನುದಾನ ಬಳಕೆ ಆಗದಿರುವ ಬಗ್ಗೆ ಅಸಮಾಧಾನವಿದೆ. ರಾಜ್ಯಕ್ಕೆ ಅನ್ವಯವಾಗುವ ರೀತಿಯಲ್ಲಿ ಮಾರ್ಗಸೂಚಿ ಬದಲಾವಣೆ ಮಾಡಲು ಚಿಂತನೆ ನಡೆಸಲಾಗಿದೆ’ ಎಂದು ಹೇಳಿದರು.

15 ಸಚಿವರ ವಿರುದ್ಧ ದೂರು ಕೊಟ್ಟ ರೇಣುಕಾಚಾರ್ಯ

ಬೆಂಗಳೂರು: 15ಕ್ಕೂ ಹೆಚ್ಚು
ಸಚಿವರು ಬಿಜೆಪಿ ಶಾಸಕರ ಅಹವಾಲುಗಳಿಗೆ ಸ್ಪಂದಿಸುತ್ತಿಲ್ಲ.
ಶಾಸಕರ ದೂರವಾಣಿ ಕರೆಗಳನ್ನೂ
ಸ್ವೀಕರಿಸುವುದಿಲ್ಲ ಎಂದು ದೂರಿ
ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಭೇಟಿ ಮಾಡಿ ಲಿಖಿತ ದೂರು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.