ADVERTISEMENT

ಮಳೆಗೆ ಪ್ರಾರ್ಥಿಸಿ ಪರ್ಜನ್ಯ ಹೋಮ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 13:42 IST
Last Updated 6 ಜೂನ್ 2019, 13:42 IST
ದೇಗುಲವೊಂದರಲ್ಲಿ ಗುರುವಾರ ಪರ್ಜನ್ಯ ಹೋಮ ನಡೆಯಿತು
ದೇಗುಲವೊಂದರಲ್ಲಿ ಗುರುವಾರ ಪರ್ಜನ್ಯ ಹೋಮ ನಡೆಯಿತು   

ರಾಮನಗರ: ಉತ್ತಮ ಮಳೆಗೆ ಪ್ರಾರ್ಥಿಸಿ ಜಿಲ್ಲೆಯ ವಿವಿಧ ದೇಗುಲಗಳಲ್ಲಿ ಗುರುವಾರ ಪರ್ಜನ್ಯ ಹೋಮವು ನಡೆಯಿತು.

ಸರ್ಕಾರದ ಆದೇಶದಂತೆ ಮುಜರಾಯಿ ಇಲಾಖೆಯ ಅಧೀನದಲ್ಲಿ ಇರುವ ಆಯ್ದ ದೇಗುಲಗಳಲ್ಲಿ ಈ ಹೋಮ ಕಾರ್ಯವನ್ನು ಕೈಗೊಳ್ಳಲಾಯಿತು. ಬೆಳಗ್ಗೆ 4.30ರಿಂದ ಆರಂಭಗೊಂಡು 7 ಗಂಟೆವರೆಗೂ ನಡೆಯಿತು. ಕೆಲವು ಕಡೆ ಬೆಳಿಗ್ಗೆ 10 ಗಂಟೆ ನಂತರ ಪೂರ್ಣಾಹುತಿಯಾಯಿತು.

ಮಾಗಡಿಯ ಶ್ರೀರಂಗನಾಥ ಸ್ವಾಮಿ ದೇವಾಲಯದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಪ್ರಾರಂಭಗೊಂಡ ಹೋಮವು 7 ಗಂಟೆಗೆ ಪೂರ್ಣಾಹುತಿ ಗೊಂಡಿತು. ಕೊಳ್ಳೇಗಾಲದ ಅರ್ಚಕರಾದ ಶಶಿಧರ ಭಟ್ ನೇತೃತ್ವ ವಹಿಸಿದ್ದರು. ಸಾವನದುರ್ಗದ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ 7 ಗಂಟೆಗೆ ಹೋಮ ಆರಂಭಗೊಂಡು, 10 ಗಂಟೆಗೆ ಪೂರ್ಣಾಹುತಿಯಾಯಿತು.

ADVERTISEMENT

ರಾಮನಗರದ ಅವ್ವೇರಹಳ್ಳಿಯಲ್ಲಿನ ರೇವಣಸಿದ್ದೇಶ್ವರ ಸ್ವಾಮಿ ದೇವಾಲಯ, ಕನಕಪುರದ ಕಬ್ಬಾಳು, ಕಲ್ಲಹಳ್ಳಿಯ ವೆಂಕಟರಮಣ ದೇವಾಲಯ, ಚನ್ನಪಟ್ಟಣದ ಕೆಂಗಲ್ ಆಂಜನೇಯ ಸ್ವಾಮಿ, ಆಪ್ರಮೇಯ ಸ್ವಾಮಿ ದೇವಾಲಯಗಳಲ್ಲಿ ಹೋಮ, ಜಪ ನಡೆಯಿತು. ಇನ್ನೂ ಕೆಲವು ದೇಗುಲಗಳಲ್ಲಿಯೂ ಹೋಮ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.