ADVERTISEMENT

ಮುತ್ತಿನ ಪಲ್ಲಕ್ಕಿ ಉತ್ಸವ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 14:06 IST
Last Updated 16 ಏಪ್ರಿಲ್ 2019, 14:06 IST
ಮಾಗಡಿ ತಾಲ್ಲೂಕಿನ ಬಿಸ್ಕೂರು ರಂಗನಾಥಸ್ವಾಮಿ ದುಂಡುಮಲ್ಲಿಗೆ ಹೂವಿನ ಪಲ್ಲಕ್ಕಿ ಉತ್ಸವ ನಡೆಯಿತು
ಮಾಗಡಿ ತಾಲ್ಲೂಕಿನ ಬಿಸ್ಕೂರು ರಂಗನಾಥಸ್ವಾಮಿ ದುಂಡುಮಲ್ಲಿಗೆ ಹೂವಿನ ಪಲ್ಲಕ್ಕಿ ಉತ್ಸವ ನಡೆಯಿತು   

ಕುದೂರು(ಮಾಗಡಿ): ಬಿಸ್ಕೂರು ರಂಗನಾಥಸ್ವಾಮಿ ಜಾತ್ರೆ ಅಂಗವಾಗಿ ಸೋಮವಾರ ರಾತ್ರಿ ದುಂಡುಮಲ್ಲಿಗೆ ಹೂವಿನ ಪಲ್ಲಕ್ಕಿ ಉತ್ಸವ ನಡೆಯಿತು. ಈರಮ್ಮದೊಡ್ಡರಂಗಯ್ಯ, ವಾಸು ಕುಟುಂಬದವರು ಪಲ್ಲಕ್ಕಿಗೆ ಹೂವು ಒದಗಿಸಿದ್ದರು. ಬೆಂಗಳೂರಿನ ವಿಜಯನಗರ ಕಲಾತಂಡದವರು ಮಂಗಳವಾದ್ಯ ನುಡಿಸಿದರು.

ಕುದೂರಿನಲ್ಲಿ ಆಂಜನೇಯಸ್ವಾಮಿ, ಲಕ್ಷ್ಮೀದೇವಿ ಅಮ್ಮನವರು, ರಾಮಲಿಂಗ ಚೌಡೇಶ್ವರಿ, ಕಾಳಿಕಾ ಪರಮೇಶ್ವರಿ, ರಾಮದೇವರು, ಮಲ್ಲೆದೇವರು, ಗಂಗಾಧರೇಶ್ವರ, ಪಳೇಕಮ್ಮ, ದಂಡಿನ ಮಾರಮ್ಮ, ಶನಿಮಹಾತ್ಮ, ಭೈರವೇಶ್ವರ, ಮುದ್ದೀರೇಶ್ವರ, ಗಂಗಮ್ಮದೇವರ ಮುತ್ತಿನ ಪಲ್ಲಕ್ಕಿ ಉತ್ಸವಗಳ ಮೆರವಣಿಗೆ ನಡೆಯಿತು. ಮಹಿಳೆಯರು ದೇವರಿಗೆ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT