ADVERTISEMENT

ಮಾಗಡಿ: ಭೈರವ ಬೆಟ್ಟದಲ್ಲಿ ಗಿಡ ನೆಡುವ ಕಾರ್ಯಕ್ರಮ

ಭೈರವ ಬೆಟ್ಟದಲ್ಲಿ ಗಿಡ ನೆಡುವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 5:42 IST
Last Updated 2 ಆಗಸ್ಟ್ 2024, 5:42 IST
ಮಾಗಡಿ ಪಟ್ಟಣದ ಶ್ರೀನಿಧಿ ಬಡಾವಣೆಯಲ್ಲಿ ಮಾಗಡಿ, ಕುದೂರು ರೋಟರಿ ಸೆಂಟ್ರಲ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮಾಗಡಿ ಪಟ್ಟಣದ ಶ್ರೀನಿಧಿ ಬಡಾವಣೆಯಲ್ಲಿ ಮಾಗಡಿ, ಕುದೂರು ರೋಟರಿ ಸೆಂಟ್ರಲ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.   

ಮಾಗಡಿ: ಭಾನುವಾರ ಆ.4ರಂದು ಕುದುರಿನ ಹೆಸರಾಂತ ಭೈರವ ಬೆಟ್ಟದದಲ್ಲಿ ರೋಟರಿ ವತಿಯಿಂದ 5 ಸಾವಿರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕುದೂರು ಸೆಂಟ್ರಲ್ ಅಧ್ಯಕ್ಷ ಎಂ.ಜಿ.ಮಹೇಶ್ ಹೇಳಿದರು.

ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರಿ ಜಾಗ ಮತ್ತು ಖಾಸಗಿ ಬಡಾವಣೆಗಳಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಕೆಲಸವನ್ನು ರೋಟರಿ ಸೆಂಟ್ರಲ್ ಹಮ್ಮಿಕೊಂಡಿದೆ. ಇತ್ತೀಚೆಗಷ್ಟೆ ಪಟ್ಟಣದ ಶ್ರೀನಿಧಿ ಬಡಾವಣೆಯಲ್ಲಿ 200 ಸಸಿ ನೆಡಲಾಗಿದೆ. ಕೋಟಿವೃಕ್ಷ ಯೋಜನೆಯಡಿ ರೈತರಿಗೆ ತೆಂಗಿನ ಸಸಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ರೋಟರಿ ಮಾಗಡಿ ಸೆಂಟ್ರಲ್ ಅಧ್ಯಕ್ಷ ಲಕ್ಷ್ಮಿಪ್ರಸಾದ್ ಮಾತನಾಡಿ, ‘ಪಟ್ಟಣದ ಶ್ರೀನಿಧಿ ಬಡಾವಣೆಯಲ್ಲಿ ಹೆಚ್ಚು ಆಮ್ಲಜನಕ ನೀಡುವ 200ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಈ ಕಾರ್ಯಕ್ಕೆ ಸಾರ್ವಜನಿಕರು ಕೂಡ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ರೋಟರಿ ಮಾಜಿ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ‘ಸಿಎಸ್ಆರ್ ಅನುದಾನದಡಿ ಅರಣ್ಯ ಇಲಾಖೆಯ 5 ಎಕರೆ ಕಾಡು ಜಾಗವನ್ನು ಗುರುತಿಸಿ ಕೊಡುವಂತೆ ಕೇಳಿಕೊಂಡಿದ್ದು, ಅಲ್ಲಿ ಸಸಿಗಳನ್ನು ನೆಟ್ಟು, ಮೂರು ವರ್ಷ ರೋಟರಿಯೇ ಪೋಷಣೆ ಮತ್ತು ನಿರ್ವಹಣೆ ಮಾಡಲಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.