ಮಾಗಡಿ: ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಆರ್.ಶಿವಪ್ರಸಾದ್ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಶಿವಪ್ರಸಾದ್ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ವೆಂಕಟೇಶ್ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷ ಎಚ್.ಆರ್. ಶಿವಪ್ರಸಾದ್ ಮಾತನಾಡಿ, ಗೋದಾಮಿಗೆ ₹30ರಿಂದ ₹40 ಸಾವಿರ ಬಾಡಿಗೆ ಪಾವತಿಸಲಾಗುತ್ತಿದೆ. ಹೊಸದಾಗಿ ಗೋದಾಮು ನಿರ್ಮಾಣವಾದರೆ ನಮಗೆ ಬಾಡಿಗೆ ಹಣ ಉಳಿತಾಯವಾಗಲಿದೆ. ಹೀಗಾಗಿ ಗೋದಾಮು ನಿರ್ಮಾಣಕ್ಕೆ ನಿರ್ದೇಶಕರ ಸಹಕಾರ ಪಡೆಯಲಾಗುವುದು ಎಂದು ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಚ್.ಎನ್. ಅಶೋಕ್, ಎಂ.ಕೆ.ಧನಂಜಯ, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಸಂಘದ ನಿರ್ದೇಶಕರಾದ ಸೋಮಶೇಖರ್, ಎನ್.ನಂಜುಂಡಯ್ಯ, ಎಂ.ರವೀಶ್ ಎಂ.ಆರ್. ಮಂಜುನಾಥ್, ಗೀತಾ, ಶಿಲ್ಪ, ಎಚ್.ವಿ. ರಾಜು, ಮಹದೇವಯ್ಯ, ರಮೇಶ್, ನಂಜುಂಡಯ್ಯ, ಟಿ.ಎಸ್.ಗಂಗಯ್ಯ, ಚಕ್ರಬಾವಿ ರವೀಂದ್ರ, ಬಸವರಾಜು, ಪಂಚಾಕ್ಷರಿ, ಮಾಜಿ ಅಧ್ಯಕ್ಷ ಚಂದ್ರೇಗೌಡ, ಸಂಘದ ಕಾರ್ಯದರ್ಶಿ ನಾರಾಯಣ್, ರಘು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.