ರಾಮನಗರ: ನಗರ ಹಾಗೂ ಸುತ್ತಮುತ್ತ ಸೋಮವಾರ ಸಂಜೆ ಕೆಲ ಹೊತ್ತು ಆಲಿಕಲ್ಲು ಮಳೆ ಸುರಿಯಿತು.
ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಇದ್ದು, ಸಂಜೆ 5,30ರ ಸುಮಾರಿಗೆ ಗುಡುಗು ಸಹಿತ ವರ್ಷಧಾರೆ ಆರಂಭಗೊಂಡಿತು. ಬಿರುಗಾಳಿಯೂ ಜೋರಿದ್ದು, ಮಳೆ ಅಷ್ಟು ಅಬ್ಬರಿಸಲಿಲ್ಲ. ಆದರೆ ಕೆಲಹೊತ್ತು ಆಲಿಕಲ್ಲುಗಳು ಉದುರಿದವು. ರಾತ್ರಿ 7ರವರೆಗೂ ಮಳೆ ಹನಿಯುತ್ತಾ ಇತ್ತು.
ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದಾಗಿ ಮಾವು ಬೆಳೆಗೆ ಹಾನಿಯಾಗುವ ಸಾಧ್ಯತೆ ಇದೆ. ಆಲಿಕಲ್ಲು ಹೊಡೆತಕ್ಕೆ ಕಾಯಿ ಕಪ್ಪಾದರೆ ನಷ್ಟ ಎಂಬುದು ರೈತರ ಆತಂಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.