ಮಾಗಡಿ: ಜೆಡಿಎಸ್ ಅಭಿಮಾನಿಯೊಬ್ಬರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಭಾವಚಿತ್ರಗಳನ್ನು ರಕ್ತದಲ್ಲಿ ಬರೆದು ಅಭಿಮಾನ ಮೆರೆದಿದ್ದಾರೆ.
ಪಟ್ಟಣದ ಜ್ಯೋತಿ ನಗರದ ನಿವಾಸಿ ಹನುಮಂತರಾವ್ ರಕ್ತದಲ್ಲಿ ಚಿತ್ರ ಬರೆದು ಅಭಿಮಾನ ತೋರಿದವರು. ವೃತ್ತಿಯಲ್ಲಿ ಹಾವುಗಳನ್ನು ಹಿಡಿದು ಕಾಡಿಗೆ ಬಿಡುವ ಕಾಯಕ ಮಾಡಿಕೊಂಡಿರುವ ಹನುಮಂತರಾವ್, ’ರಕ್ತದಲ್ಲಿ ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ ಮತ್ತು ನಿಖಿಲ್ ಚಿತ್ರ ಬಿಡಿಸಿದ್ದೇನೆ. ಇದೇ ನನ್ನ ಅಭಿಮಾನ‘ ಎಂದಿದ್ದಾರೆ.
'ಗೆದ್ದೆ ಗೆಲುವೆವು ಒಂದು ದಿನ ಗೆಲ್ಲಲೇಬೇಕು ಒಳ್ಳೆಯತನ' ಎಂದು ಬರೆದು ಸಹಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.