ADVERTISEMENT

ರಾಮನಗರ: ಹೋಟಲ್‌ನಲ್ಲಿದ್ದ ರಾತ್ರಿ ಕಾವಲುಗಾರನ ಹತ್ಯೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 4:03 IST
Last Updated 16 ನವೆಂಬರ್ 2025, 4:03 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಐಸ್ಟಾಕ್ ಚಿತ್ರ

ರಾಮನಗರ: ಬಿಡದಿ ಲಕ್ಷ್ಮಿಸಾಗರ್ ಗೇಟ್‌ನಲ್ಲಿರುವ ಕದಂಬ ಹೋಟಲ್‌ನಲ್ಲಿ ಗುರುವಾರ ತಡರಾತ್ರಿ ಕಾವಲುಗಾರನನ್ನು ನಾಲ್ವರು ಬಲವಾದ ಆಯುಧವೊಂದರಿಂದ ಕಿವಿ ಭಾಗಕ್ಕೆ ಚುಚ್ಚಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ADVERTISEMENT

ಹತ್ಯೆಗೀಡಾದವರು ಚನ್ನಪಟ್ಟಣ ತಾಲ್ಲೂಕಿನ ಕೊಂಡಾಪುರ ಗ್ರಾಮದ ನಿಶಾಂತ್ (25). ಕಳೆದ ಎರಡು ತಿಂಗಳಿಂದ ಈ ಹೋಟೆಲ್‌ನಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ.

ಘಟನೆ ಸಮಯದಲ್ಲಿ ಹೋಟೆಲ್‌ನಲ್ಲಿ ಇದ್ದ ಇಬ್ಬರು ಅಡುಗೆ ಸಿಬ್ಬಂದಿ ನಿದ್ದೆಯಲ್ಲಿದ್ದರು. ಹತ್ಯೆ ನಡೆಸಿದ ನಂತರ ಕೊಲೆ ಆರೋಪಿಗಳು ಹೋಟೆಲ್‌ ಸಿಸಿಟಿವಿ ಕ್ಯಾಮೆರಾ ಡಿವಿಆರ್ ಸಾಧನ ಕಿತ್ತುಕೊಂಡು ಪರಾರಿಯಾಗಿದ್ದಾನೆ.

 ಬಿಡದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ನಂತರ ಘಟನಾ ಸ್ಥಳಕ್ಕೆ ಎಸ್.ಪಿ ಶ್ರೀನಿವಾಸ್ ಗೌಡ, ಎಎಸ್ಪಿ ರಾಮಚಂದ್ರಯ್ಯ, ಡಿವೈಎಸ್ಪಿ ಶ್ರೀನಿವಾಸ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.