ಕನಕಪುರ: ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಪ್ರಕರಣವನ್ನು ಕನಕಪುರ ತಾಲ್ಲೂಕು ಬ್ರಾಹ್ಮಣರ ಸಂಘ ಖಂಡಿಸಿ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.
ಇಲ್ಲಿನ ಕೋಟೆ ರಾಮ ಮಂದಿರದಲ್ಲಿ ಬ್ರಾಹ್ಮಣರ ಸಂಘದ ಪದಾಧಿಕಾರಿಗಳು ಪಾಲ್ಗೊಂಡು ಅಧಿಕಾರಿಗಳ ನಡೆಯನ್ನು ಖಂಡಿಸಿದರು.
ಸಂಘದ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ‘ಇತಿಹಾಸದಲ್ಲಿ ಎಂದೂ ಇಂತಹ ಘಟನೆ ನಡೆದಿಲ್ಲ. ಮುಸ್ಲಿಮರಿಗೆ ಹಿಜಾಬ್ ಧರಿಸಲು ಅವಕಾಶ ಮಾಡಿಕೊಡಲಾಗಿದೆ. ನಮಗೇಕೆ ಜನಿವಾರ ತೆಗೆಸಿದರು’ ಎಂದು ಕಿಡಿಕಾರಿದರು.
ಜನಿವಾರ ಕೇವಲ ಬ್ರಾಹ್ಮಣರು ತೊಡುವುದಿಲ್ಲ. ಆರ್ಯರು, ವೈಶ್ಯರು ತೊಡುತ್ತಾರೆ. ಪರೀಕ್ಷೆ ನೆಪದಲ್ಲಿ ಜನಿವಾರ ತೆಗೆಸಿರುವುದು ಈ ಮೂರು ಸಮುದಾಯದ ಜನರು ಮತ್ತು ನಂಬಿಕೆಗೆ ಮಾಡಿದ ಅಪಮಾನ ಎಂದರು.
ಬ್ರಾಹ್ಮಣ ಸಂಘದ ಪದಾಧಿಕಾರಿಗಳಾದ ಶಿವಶಂಕರ್, ಅಂಬಾಪ್ರಸಾದ್, ಉದಯಶಂಕರ್, ರವೀಂದ್ರ ಬಾಬು ಮಾತನಾಡಿ ಬ್ರಾಹ್ಮಣರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದರು.
ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಅಧಿಕಾರಿಗಳ ವಿರುದ್ಧ ಕ್ರಮಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.