ADVERTISEMENT

ಕನಕಪುರ | ಪರಿಸರ ನಾಶ ತಡೆ ತುರ್ತು: ಚಿಕ್ಕೆಂಪೇಗೌಡ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2024, 14:29 IST
Last Updated 3 ಸೆಪ್ಟೆಂಬರ್ 2024, 14:29 IST
ಕನಕಪುರ ಶಿವನಹಳ್ಳಿ ಟ್ರೀ ಪಾರ್ಕಿನಲ್ಲಿ ಲೈನ್ಸ್ ಕ್ಲಬ್ ನೇಗಿಲಯೋಗಿ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಗಿಡ ನೀಡುತ್ತಿರುವುದು ಸಂಘ-ಸಂಸ್ಥೆಯವರು ಅಧಿಕಾರಿಗಳು ಉಪಸ್ಥಿತರಿದ್ದರು
ಕನಕಪುರ ಶಿವನಹಳ್ಳಿ ಟ್ರೀ ಪಾರ್ಕಿನಲ್ಲಿ ಲೈನ್ಸ್ ಕ್ಲಬ್ ನೇಗಿಲಯೋಗಿ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಗಿಡ ನೀಡುತ್ತಿರುವುದು ಸಂಘ-ಸಂಸ್ಥೆಯವರು ಅಧಿಕಾರಿಗಳು ಉಪಸ್ಥಿತರಿದ್ದರು   

ಕನಕಪುರ: ಪರಿಸರ ಸಂರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ವಿಪತ್ತನ್ನು ಎದುರಿಸಬೇಕಾಗುತ್ತದೆ ಎಂದು ಕನಕಪುರ ಲಯನ್ ಕ್ಲಬ್, ಸಿಲ್ಕ್ ಸಿಟಿಯ ಕಾರ್ಯದರ್ಶಿ ಚಿಕ್ಕೆಂಪೇಗೌಡ ಎಚ್ಚರಿಸಿದರು.

ಇಲ್ಲಿನ ಕೋರ್ಟ್ ಪಕ್ಕದಲ್ಲಿರುವ ಶಿವನಹಳ್ಳಿ ಟ್ರೀ ಪಾರ್ಕಿನಲ್ಲಿ ಲಯನ್ ಕ್ಲಬ್ ಆಫ್ ಕನಕಪುರ ಸಿಲ್ಕ್ ಸಿಟಿ ಮತ್ತು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ಅರಣ್ಯ ಇಲಾಖೆ ಸಹಯೋಗದಲ್ಲಿ ಗಿಡ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಭಿವೃದ್ಧಿ ಹೆಸರಿನಲ್ಲಿ ನಾವು ಪರಿಸರವನ್ನು ನಾಶ ಮಾಡುತ್ತಿದ್ದೇವೆ, ಪ್ರಕೃತಿಯಲ್ಲಿ ಅಸಮತೋಲನವಾಗುತ್ತಿದೆ, ಇದೆಲ್ಲದರ ಪರಿಣಾಮವಾಗಿ
ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಇದು ನಮಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ತಿಳಿಸಿದರು.

ADVERTISEMENT

ಪ್ರಕೃತಿಯಲ್ಲಿ ಆಗುತ್ತಿರುವ ಅಸಮತೋಲನ ಮತ್ತು ಪ್ರಕೃತಿ ನಾಶವನ್ನು ತಡೆಯಬೇಕೆಂದರೆ ಜನಸಂಖ್ಯೆಗೆ ಅನುಗುಣವಾಗಿ ಮರ ಗಿಡಗಳನ್ನು ಬೆಳೆಸಬೇಕಿದೆ. ಅದಕ್ಕಾಗಿ ಲಯನ್ ಸಂಸ್ಥೆ ಮತ್ತು ನೇಗಿಲಯೋಗಿ ಸಂಸ್ಥೆಯಿಂದ 'ಪರಿಸರ ಸಂರಕ್ಷಣೆ ನಮ್ಮ ನಮ್ಮೆಲ್ಲರ ಹೊಣೆ' ಎಂಬ ವೇದವಾಕ್ಯ ದಡಿಯಲ್ಲಿ ಇಂದು ಗಿಡ ನೆಡುವ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು.

ನೇಗಿಲ ಯೋಗಿ ಸಮಾಜ ಸೇವೆ ಟ್ರಸ್ಟ್ ನ ಅಧ್ಯಕ್ಷ ಗಬ್ಬಾಡಿ ಕಾಡೇಗೌಡ ಮಾತನಾಡಿ ನಗರೀಕರಣ, ಕೈಗಾರಿಕರಣದಿಂದ ವಾಯುಮಾಲಿನ್ಯ, ಪರಿಸರಮಾಲಿನ್ಯ ಆಗುತ್ತಿದೆ. ನಾವು ದಿನ ನಿತ್ಯ ಉಪಯೋಗಿಸುವ ಪ್ಲಾಸ್ಟಿಕ್ ಡಿಸೇಲ್, ಪೆಟ್ರೋಲ್ ವಾಹನಗಳಿಂದಾಗಿ ಪರಿಸರ ಕಲಿಷಿತವಾಗಿ ಮನುಕುಲಕ್ಕೆ ಆಪತ್ತು ಎದುರಾಗಲಿದೆ, ಅದಕ್ಕಾಗಿ ನಾವು ಪರಿಸರ ಸ್ನೇಹಿ ವಾಹನಗಳನ್ನು ಬಳಸಬೇಕು ಎಂದರು.

ವಲಯ ಅರಣ್ಯಾಧಿಕಾರಿ ಎ.ಎಲ್.ದಾಳೇಶ್ ಮಾತನಾಡಿ ಶಿವನಹಳ್ಳಿ, ‘ಸಾಲಿನಲ್ಲಿ 600 ಗಿಡಗಳನ್ನು ನೆಡುವ ಸಂಕಲ್ಪ ಮಾಡಿದ್ದು ಅದಕ್ಕೆ ಹಲವು ಸಂಘ ಸಂಸ್ಥೆಗಳು ನಮ್ಮ ಜೊತೆ ಕೈ ಜೋಡಿಸಿವೆ, ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಮನೆಗೊಂದು ಗಿಡ, ಊರಿಗೊಂದು ವನವನ್ನು ನಿರ್ಮಿಸಬೇಕೆಂದು ಮನವಿ ಮಾಡಿದರು.

ಲಯನ್ ಕ್ಲಬ್ ಆಫ್ ಕನಕಪುರ ಸಿಲ್ಕ್ ಸಿಟಿ ಅಧ್ಯಕ್ಷ ಮಧುಸೂದನ್ ನೇತೃತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಲಯನ್ ಸದಸ್ಯರಾದ ಬಿ.ಎಸ್.ಗೌಡ, ನಂದಿಶ್, ಶಂಕರ್, ಉಪ ವಲಯ ಅರಣ್ಯ ಅಧಿಕಾರಿ ಶಿವಕುಮಾರ್, ವನಪಾಲಕ ಅಣ್ಣಯ್ಯ ಮತ್ತು ಅರಣ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.