Krishna janamastami
ರಾಮನಗರ: ನಗರದ ನೇತಾಜಿ ಪಾಪುಲರ್ ಆಂಗ್ಲ ಶಾಲೆಯಲ್ಲಿ ಶನಿವಾರ ಅದ್ದೂರಿಯಾಗಿ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಶಾಲೆಯ ಮಕ್ಕಳು ಕೃಷ್ಣ ಮತ್ತು ರಾಧೆ ವೇಷಧಾರಿಗಳಾಗಿ ಬಂದು ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಕೃಷ್ಣನ ಹಾಡುಗಳು ಅನುರಣಿಸಿದವು.
ಮಕ್ಕಳು ಮೊಸರಿನ ಮಡಿಕೆ ಹೊಡೆಯುವ ಮತ್ತು ಸಾಮೂಹಿಕ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ರಾಧಾ– ಕೃಷ್ಣ ವೇಷಧಾರಿಯಾಗಿದ್ದ ಮಕ್ಕಳಿಗೆ ಶಾಲೆಯಿಂದ ಕಿರು ಕಾಣಿಕೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಕಾರ್ಯದರ್ಶಿ ವಸಂತ ವೀರೇಗೌಡ, ‘ಪವಾಡ ಪುರುಷನಾದ ಕೃಷ್ಣನನ್ನು ಚಿಣ್ಣರಾದಿಯಾಗಿ ಎಲ್ಲರೂ ಇಷ್ಟಪಡುತ್ತಾರೆ. ಆತನ ಲೀಲೆಗಳು ಎಲ್ಲರಿಗೂ ಅಚ್ಚುಮೆಚ್ಚು. ದ್ವಾಪರಯುಗದಲ್ಲಿ ಜನಿಸಿದ ಕೃಷ್ಣ ಮಹಾಭಾರತ ಯುದ್ಧದಲ್ಲಿ ಅರ್ಜುನನಿಗೆ ನೀಡಿದ ಬೋಧನೆಯು ಭಗವದ್ಗೀತೆಯಾಗಿ ಹಿಂದೂ ಧರ್ಮದ ಪವಿತ್ರ ಗ್ರಂಥವಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಮೀನಾಕ್ಷಿ, ನಾಗೇಂದ್ರ ಕುಮಾರ್, ಚಾಮಶೆಟ್ಟಿ, ನಾಗಮಣಿ, ಬಸವಲಿಂಗಚಾರ್, ಪ್ರವೀಣ್, ನವೀನ್, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಪೋಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.