ADVERTISEMENT

ಚನ್ನಪಟ್ಟಣ: ರಾಂಪುರ ಗ್ರಾ.ಪಂ; ಉಪಾಧ್ಯಕ್ಷೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 2:49 IST
Last Updated 4 ನವೆಂಬರ್ 2025, 2:49 IST
ನಯನ ಅರುಣ್
ನಯನ ಅರುಣ್   

ಚನ್ನಪಟ್ಟಣ: ತಾಲ್ಲೂಕಿನ ರಾಂಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಆರ್.ನಯನ ಅರುಣ್ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದಿನ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜೀನಾಮೆಯಿಂದ ತೆರೆವಾಗಿದ್ದ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಆರ್.ನಯನ ಅರುಣ್ ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಕಣ್ವ ಯೋಜನಾ ಆಧುನಿಕ ವಿಭಾಗದ ಸಹಾಯಕ ಎಂಜಿನಿಯರ್ ಚೈತ್ರ ಕಾರ್ಯನಿರ್ವಸಿದರು.

ಗ್ರಾ.ಪಂ.ಅಧ್ಯಕ್ಷ ಯೋಗಲಿಂಗು, ಸದಸ್ಯರಾದ ಲಕ್ಷ್ಮಿ, ಎನ್.ಕಿರಣ್ ಕುಮಾರ್, ಜೆ.ಲಕ್ಷ್ಮಿ, ಎ.ಜಿ.ತನುಜಾ, ಜಯರಾಜಯ್ಯ, ಸಿದ್ದಾಚಾರಿ, ಕೆ.ಸವಿತ, ಡಿ.ವಿ. ಸೌಮ್ಯ. ವಿ.ಎಂ.ವಿಮಲ, ಜಯಮ್ಮ, ಮಂಜುಳ, ಶ್ರೀಕಾಂತ, ನಂದಿನಿ, ಗ್ರಾಮದ ಮುಖಂಡರು ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.