
ಪ್ರಜಾವಾಣಿ ವಾರ್ತೆ
ಮಾಗಡಿ: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕಕ್ಕೆ ಎಲ್.ನಂಜಯ್ಯ ಎರಡನೇ ಬಾರಿಗೆ ಅಧ್ಯಕ್ಷರಾಗಿ ಪುನರಾಯ್ಕೆಯಾದರು. 
 ಪ್ರಧಾನ ಕಾರ್ಯದರ್ಶಿಯಾಗಿ ಎ.ಗಂಗಭೋರಯ್ಯ, ಉಪಾಧ್ಯಕ್ಷರಾಗಿ ಎಂ.ಮಹದೇವಯ್ಯ, ಪಿ.ನಾಗರಾಜು, ಎಂ.ರಾಮಕೃಷ್ಣಯ್ಯ ಹಾಗೂ ಖಜಾಂಚಿಯಾಗಿ ಆಂಜಿನಪ್ಪ, ಅಂತರಿಕ ಲೆಕ್ಕಪರಿಶೋಧಕರಾಗಿ ವಿಜಯಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿ ಮಾರಣ್ಣ, ಸಂಘಟನಾ ಕಾರ್ಯದರ್ಶಿ ಎಲ್.ಕೆಂಚನರಸಯ್ಯ ಮತ್ತು ಪುಟ್ಟನರಸಯ್ಯ, ಗೌರವಾಧ್ಯಕ್ಷರಾಗಿ ಪ್ರಭುದೇವರು ಮತ್ತು ಕೆ.ಎಸ್.ಹನುಮಗೌಡ, ಸಹಕಾರ್ಯದರ್ಶಿಯಾಗಿ ದೇವರಾಜ್, ನಿರ್ದೇಶಕರಾಗಿ ಮರೂರು ರೇಣುಕಪ್ಪ ಮತ್ತು ನಂಜುಂಡಯ್ಯ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದರು.
ನೂತನ ಅಧ್ಯಕ್ಷ ಎಲ್.ನಂಜಯ್ಯ ಮಾತನಾಡಿ, ನಿವೃತ್ತ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಸಿಗಬೇಕಾದ ಸವಲತ್ತು ನೀಡಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.