ಹಾರೋಹಳ್ಳಿ: ಹಾರೋಹಳ್ಳಿ ಕ್ಲಬ್ 2024-25ನೇ ಸಾಲಿನ ಪದವಿ ಸ್ವೀಕಾರ ಸಮಾರಂಭ ನಡೆಯಿತು. ಸುನೀಲ್ ರಾವ್ ಸಿಂಧೆ ಅಧ್ಯಕ್ಷರಾಗಿ ಪದವಿ ಸ್ವೀಕರಿಸಿದರು. ಕಾರ್ಯದರ್ಶಿಯಾಗಿ ರೋ.ಜಗದೀಶ್ ಮತ್ತು ಖಜಾಂಚಿಯಾಗಿ ರೋ.ಸಿದ್ದಾರ್ಥ ಅಧಿಕಾರ ಸ್ವೀಕರಿಸಿದರು.
ಯೋಜಿತ ಅಧ್ಯಕ್ಷರಾಗಿ ನಾಗರಾಜು ವಿ, ಜಂಟಿ ಕಾರ್ಯಯದರ್ಶಿಯಾಗಿ ಬಸವರಾಜ್, ನಿರ್ದೇಶಕರಾಗಿ ನಾಗರಾಜ್ ಎಂ, ಪ್ರಕಾಶ್, ತಿಮ್ಮೇಗೌಡ, ದಿವ್ಯಶ್ರೀ, ಭರತ್, ರತ್ನಾ, ಹೊನ್ನೇಗೌಡ, ಮಂಜುಳಾ, ಅರುಣ್, ವಾಸಂತಿ, ಸುನೀತಾ, ಪೂರ್ಣಿಮಾ, ಜೀವನ್, ಗೋವಿಂದರಾಜು, ದೀಪಕ್ ಹಾಗೂ ಪ್ರಾಣೇಶ್ ಪದವಿ ಸ್ವೀಕರಿಸಿದರು.
ಹೊಸ ಅಭ್ಯರ್ಥಿಗಳಾಗಿ ಶ್ರೀಧರ್ ಶೆಟ್ಟಿ, ಪ್ರಿಯದರ್ಶಿನಿ ಮತ್ತು ವಜ್ರೇಶ್ವರಿ ಕ್ಲಬ್‌ಗೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ರಾಜು ಮತ್ತು ಮುಖ್ಯ ಶಿಕ್ಷಕರಾದ ಲಕ್ಕಪ್ಪ ಅವರಿಗೆ ವೃತ್ತಿ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಮೀರ್ ಹರಿಯಾನಿ, ರಾಘವೇಂದ್ರ ಇನಾಮ್ಹಾರ್, ರವಿಕುಮಾರ್ ಎನ್., ವಿಜಯ್, ಗವಿರಾಜ್ ಕೆ. ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.