ADVERTISEMENT

ಚನ್ನಪಟ್ಟಣ: ಸಾಲುಮರದ ತಿಮ್ಮಕ್ಕಗೆ ನಮನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 5:09 IST
Last Updated 26 ನವೆಂಬರ್ 2025, 5:09 IST
<div class="paragraphs"><p>ಚನ್ನಪಟ್ಟಣದ ನ್ಯೂ ಡಾನ್ ಬಾಸ್ಕೋ ಶಾಲೆ ಆವರಣದಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ, ಕರ್ನಾಟಕ ಸಂವಿಧಾನ ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಎನ್.ನರಸಿಂಹಮೂರ್ತಿ ಇತರರು ಹಾಜರಿದ್ದರು</p></div>

ಚನ್ನಪಟ್ಟಣದ ನ್ಯೂ ಡಾನ್ ಬಾಸ್ಕೋ ಶಾಲೆ ಆವರಣದಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ, ಕರ್ನಾಟಕ ಸಂವಿಧಾನ ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಎನ್.ನರಸಿಂಹಮೂರ್ತಿ ಇತರರು ಹಾಜರಿದ್ದರು

   

ಚನ್ನಪಟ್ಟಣ: ಪ್ರಜ್ಞಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನಗರದ ನ್ಯೂ ಡಾನ್ ಬಾಸ್ಕೊ ಶಾಲೆ ಆವರಣದಲ್ಲಿ ಸೋಮವಾರ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ ನಡೆಯಿತು.

ಪರಿಸರ ಸಂರಕ್ಷಣೆಗೆ ನಿಸ್ವಾರ್ಥ ಸೇವೆ ಸಲ್ಲಿಸಿರುವ ಸಾಲುಮರದ ತಿಮ್ಮಕ್ಕ ಅವರ ಜೀವನ ಸಂಗತಿ, ಮಾನವೀಯತೆ, ಪರಿಸರ ಕಾಳಜಿ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು.

ADVERTISEMENT

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ, ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಅವರ ಸರಳ ಬದುಕಿನಲ್ಲಿ ಅಸಾಮಾನ್ಯ ಸಾಧನೆ ಮಾಡಿದರು. ನಿಸ್ವಾರ್ಥ ಸೇವೆಯಿಂದ ಪಡೆದ ಪದ್ಮಶ್ರೀ ಗೌರವ ಪ್ರತಿಯೊಬ್ಬರಿಗೂ ಸ್ಫೂರ್ತಿ. ಪರಿಸರಕ್ಕಾಗಿ ಮಾಡಿದ ಅವರ ಪ್ರೀತಿ ಹಾಗೂ ತ್ಯಾಗ ಸಮಾಜಕ್ಕೆ ದಾರಿದೀಪವಾಗಲಿ ಎಂದರು.

ಕರ್ನಾಟಕ ಸಂವಿಧಾನ ಸೇನೆ ರಾಜ್ಯಾಧ್ಯಕ್ಷ ಎಚ್.ಎನ್.ನರಸಿಂಹಮೂರ್ತಿ ಮಾತನಾಡಿ, ಪರಿಸರ ಸಂರಕ್ಷಣೆ ಮತ್ತು ಸಂಸ್ಕೃತಿ ಮೌಲ್ಯ ಮಕ್ಕಳಲ್ಲಿ ಬೆಳೆಸಲು ಇಂತಹ ಕಾರ್ಯಕ್ರಮ ಅಗತ್ಯ. ಸಾಲುಮರದ ತಿಮ್ಮಕ್ಕ ಅವರನ್ನು ಸ್ಮರಿಸುವುದು ಕೇವಲ ಗೌರವವಲ್ಲ. ಅದು ಸಮಾಜಕ್ಕೆ ನೀಡುವ ಸಂದೇಶ ಆಗಿದೆ ಎಂದರು.

ಡಾ.ರವಿಕುಮಾರ್, ಕದಂಬ ಕನ್ನಡ ಸೇನೆ ರಾಜ್ಯಾಧ್ಯಕ್ಷ ಎಸ್.ಶಿವಕುಮಾರ್, ಮುಖಂಡ ಮತ್ತೀಕೆರೆ ಹನುಮಂತಯ್ಯ, ಸಹಕಾರ ಬ್ಯಾಂಕ್ ವ್ಯವಸ್ಥಾಪಕ ಸಿದ್ದರಾಜು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಲೋಕೇಶ್ ಮೌರ್ಯ, ದಲಿತ ಸಂಘರ್ಷ ಸಮಿತಿ ಸಂಚಾಲಕ ವೆಂಕಟೇಶ್, ಪ್ರಭಾಕರ್, ನಿವೃತ್ತ ನೌಕರ ಜಿ.ಸಿದ್ದಯ್ಯ, ಹನುಮಂತಯ್ಯ ಇತರರು ಭಾಗವಹಿಸಿದ್ದರು.

ಸರ್ವೋತ್ತಮ, ಸಿದ್ದರಾಮ, ಪ್ರಕಾಶ್, ಪ್ರಸನ್ನ, ಇತರರು ಗೀತಗಾಯನ ನಡೆಸಿಕೊಟ್ಟರು. ಉಪನ್ಯಾಸಕ ಬಿ.ಪಿ.ಸುರೇಶ್ ಸ್ವಾಗತಿಸಿದರು. ಕೂಡ್ಲೂರು ಸಿದ್ದರಾಮ ಪ್ರಾರ್ಥಿಸಿದರು. ಪ್ರಜ್ಞಾ ಸಂಸ್ಥೆ ಸಂಸ್ಥಾಪಕ ಎನ್.ಡಿ.ಸಿದ್ದರಾಮು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.