ADVERTISEMENT

ಮುದ ನೀಡಿದ ‘ಸಂಗೀತ ಸುಭದ್ರಾ’

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 7:38 IST
Last Updated 22 ಡಿಸೆಂಬರ್ 2023, 7:38 IST
ಮಾಗಡಿ ನಾಟಕೋತ್ಸವದಲ್ಲಿ ಗಂಗೋನಹಳ್ಳಿ ನಾದರಂಜನಿ ಕಲಾವಿದರು ಅಭಿನಯಿಸಿದ ಸಂಗೀತ ಸುಭದ್ರಾ ಪೌರಾಣಿಕ ನಾಟಕದ  ದುರ್ಯೋಧನನ ದರ್ಬಾರ್‌ ದೃಶ್ಯ
ಮಾಗಡಿ ನಾಟಕೋತ್ಸವದಲ್ಲಿ ಗಂಗೋನಹಳ್ಳಿ ನಾದರಂಜನಿ ಕಲಾವಿದರು ಅಭಿನಯಿಸಿದ ಸಂಗೀತ ಸುಭದ್ರಾ ಪೌರಾಣಿಕ ನಾಟಕದ  ದುರ್ಯೋಧನನ ದರ್ಬಾರ್‌ ದೃಶ್ಯ   

ಮಾಗಡಿ: ಪಟ್ಟಣದಲ್ಲಿ ನಡೆಯುತ್ತಿರುವ ಗ್ರಾಮೀಣ ನಾಟಕೋತ್ಸವ ಸ್ಪರ್ಧೆಯಲ್ಲಿ ಗುರುವಾರ ತಿಪ್ಪಸಂದ್ರ ಹೋಬಳಿ ಗಂಗೋನಹಳ್ಳಿಯ ನಾದರಂಜನಿ ಕಲಾ ಸಂಘದ ಕಲಾವಿದರು ಅಭಿನಯಿಸಿದ ‘ಸಂಗೀತ ಸುಭದ್ರಾ’ ಪೌರಾಣಿಕ ನಾಟಕ ಕಲಾಭಿಮಾನಿಗಳ ಮನಸೂರೆಗೊಂಡಿತು.  

ವಿದ್ವಾನ್‌ ಜಿ.ಆರ್‌.ರಾಮಕೃಷ್ಣನ್‌ ನಾಟಕಕ್ಕೆ ಚಾಲನೆ ನೀಡಿದರು. ಕನ್ನಡ ರಂಗಭೂಮಿ ರಾಜಾಶ್ರಯ ಮತ್ತು ಜನಪದರ ಆಶ್ರಯದಲ್ಲಿ ಬೆಳೆದು ಬಂದಿದೆ. ದಾಸರಾಟ, ಬಯಲಾಟ, ಕೃಷ್ಣ ಪಾರಿಜಾತ, ಸಣ್ಣಾಟ, ತಾಳ ಮದ್ದಲೆ ಮೊದಲಾದವು ಕನ್ನಡ ರಂಗಭೂಮಿಯ ವೈಭವ ಸಾರಿವೆ ಎಂದರು.

ರಂಗನಾಥಪ್ಪ, ಡಿ.ಕೆ.ಶೇಷಾದ್ರಿ, ಹಾರೋಹಳ್ಳಿ ರಂಗನಾಥ್‌, ಗಿರಿಯಣ್ಣ, ಹುಳ್ಳೇನಹಳ್ಳಿ ಗುರುರಾಜ್‌, ನಾರಾಯಣ,  ಜಿ.ಆರ್‌.ಸಂಪತ್‌ಕುಮಾರ್‌  ಮಾತನಾಡಿದರು. ಶೋಕೇಶ್‌ ಕುಮಾರ್‌, ಕೃಷ್ಣಮೂರ್ತಿ, ರಾಜಣ್ಣ ಪಕ್ಕವಾದ್ಯ ನುಡಿಸಿದರು. 

ADVERTISEMENT

ಕಲಾವಿದರಾದ ಗಂಗಾಧರಪ್ಪ, ನಾರಾಯಣ ಜಿ., ಲಕ್ಕಣ್ಣ, ಜಿ.ಎಚ್‌.ಗುರು, ರಾಮಾನುಜಂ, ಸುಮಾ ಕಂಠಿ, ಜಯಶ್ರೀ,ಮಧುಶ್ರೀ,ರಾಜೇಶ್ವರಿ, ಕೃಷ್ಣಪ್ಪ, ಜಿ.ಆರ್‌.ವೆಂಕಟೇಶ್‌,ಮರಿಯಣ್ಣ, ವೆಂಕಟೇಶಯ್ಯ, ಜಿ.ಆರ್‌.ಶೇಷಾದ್ರಿ, ವೆಂಕಟಾಚಲಯ್ಯ, ಆರ್‌.ಶ್ರೀನಿವಾಸಯ್ಯ, ಶಿವಶಂಕರ್‌, ಹೊಸಪೇಟೆ ವೆಂಕಟೇಶ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.