ADVERTISEMENT

ಗೌರಿಬಿದನೂರು: ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆ ಆಚರಣೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2025, 14:18 IST
Last Updated 27 ಜನವರಿ 2025, 14:18 IST
ಗೌರಿಬಿದನೂರು ಸಂಗೊಳ್ಳಿ ರಾಯಣ್ಣ ಯುವಸೇನೆಯಿಂದ ಹುತಾತ್ಮ ದಿನ ಆಚರಿಸಲಾಯಿತು
ಗೌರಿಬಿದನೂರು ಸಂಗೊಳ್ಳಿ ರಾಯಣ್ಣ ಯುವಸೇನೆಯಿಂದ ಹುತಾತ್ಮ ದಿನ ಆಚರಿಸಲಾಯಿತು   

ಗೌರಿಬಿದನೂರು: ನಗರದಲ್ಲಿ ಸಂಗೊಳ್ಳಿ ರಾಯಣ್ಣ ಅವರ 194ನೇ ಹುತಾತ್ಮ ದಿನಾಚರಣೆ ಭಾನುವಾರ ಆಚರಿಸಲಾಯಿತು.

ಮುಖಂಡ ಅಂಜಿನಪ್ಪ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಕ್ರಾಂತಿಕಾರಿ, ವೀರಸೇನಾನಿ ಸಂಗೊಳ್ಳಿ ರಾಯಣ್ಣ. ಕಿತ್ತೂರು ಚನ್ನಮ್ಮ ಅವರ ಶಿಷ್ಯನಾಗಿ ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ಹೋರಾಡಿ ಸೆರೆ ಸಿಕ್ಕಿ ಹುತಾತ್ಮರಾದರು. ರಾಯಣ್ಣನ ದೇಶಭಕ್ತಿ ಮತ್ತು ಸ್ವಾಭಿಮಾನ ಅಚಲವಾದದ್ದು ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಯುವ ಸೇನೆ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಮಹದೇವು, ಕಾರ್ಯದರ್ಶಿ ರಾಮು, ಚಂದ್ರು, ರಾಜು, ರಾಕೇಶ್, ಮಾರುತಿ, ಈಶ್ವರ್, ನಂಜೇಗೌಡ, ಕೃಷ್ಣಪ್ಪ, ನರಸಿಂಹಯ್ಯ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.