ಮಾಗಡಿ: ಬಹುಭಾಷಾ ನಟಿ ದಿ.ಬಿ.ಸರೋಜಾ ದೇವಿ ಅವರು ಮಾಗಡಿ ತಾಲ್ಲೂಕಿನ ಚಕ್ರಬಾವಿಯಲ್ಲಿ ಬಾಲ್ಯದ ನಂಟನ್ನು ಹೊಂದಿದ್ದಾರೆ ಎಂದು ಬಿ.ಸರೋಜಾ ದೇವಿಯ ಸಂಬಂಧಿ ಚಕ್ರಬಾವಿಯ ರಾಮಕೃಷ್ಣಯ್ಯ ತಿಳಿಸಿದ್ದಾರೆ.
‘ಬಿ.ಸರೋಜಾ ದೇವಿ ನಿಧನನ ಸುದ್ದಿ ಕೇಳಿ ತುಂಬಾ ನೋವಾಯಿತು. ನಮ್ಮ ಸೋದರ ಅತ್ತೆ ಮಗಳಾಗಿದ್ದು, ಚಿಕ್ಕವಯಸ್ಸಿನಲ್ಲಿ ಚಕ್ರಬಾವಿಯಲ್ಲಿ ಬಾಲ್ಯದ ದಿನಗಳನ್ನು ಕಳೆದಿದ್ದಾರೆ. ಆ ಸಮಯದಲ್ಲಿ ಎಮ್ಮೆ ಮೇಯಿಸುತ್ತಿದ್ದರು. ಜೊತೆಗೆ ನಾಟಕ ಹಾಗೂ ಭರತನಾಟ್ಯ ಸಹ ಕಲಿಯುತ್ತಿದ್ದರು ಎಂದು ನಮ್ಮ ಪೂರ್ವಜರು ತಿಳಿಸಿದ್ದರು’.
‘ನಾವು ಇನ್ನೂ ಚಿಕ್ಕವರು. ಅವರ ಮದುವೆಗೆ ಚೆನ್ನೈಗೆ ಹೋಗಿದ್ದೆವು. ಅವರೇ ಕಾರನ್ನು ಕಳುಹಿಸಿದ್ದರು. ದಶವಾರಕ್ಕೆ ನಾವು ಚಕ್ರಬಾವಿಯಿಂದ ಕಾಲ್ನಡಿಗೆ ಮೂಲಕ ಮಾವು, ಹಲಸು, ತೆಂಗಿನಕಾಯಿ ಹಾಗೂ ಇತರ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಇವರು ನಮ್ಮ ಮನೆಯಲ್ಲಿ ಬಾಲ್ಯದ ದಿನಗಳನ್ನು ಕಳೆದಿದ್ದರು ಎಂಬುದು ಹೆಮ್ಮೆಯ ವಿಚಾರ. ಇವರು ಇನ್ನಿಲ್ಲ ಎಂಬುದು ತುಂಬಾ ಬೇಸರದ ಸಂಗತಿ’ ಎಂದು ಬಿ.ಸರೋಜಾದೇವಿ ಅವರ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.