ADVERTISEMENT

ರಾಮನಗರ: ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 2:10 IST
Last Updated 31 ಆಗಸ್ಟ್ 2025, 2:10 IST
<div class="paragraphs"><p>ರಾಮನಗರದ ಜಿಲ್ಲಾ ಪಂಚಾಯಿತಿಯಲ್ಲಿರುವ ಸಂಸದ ಕಚೇರಿಯಲ್ಲಿ ರಾಜಸ್ಥಾನ ಯೂತ್ ಅಸೋಸಿಯೇಷನ್‌ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಗೆ ಕಂಪ್ಯೂಟರ್‌ಗಳು ಮತ್ತು ಇತರ ಸಹಾಯಕ ಸಲಕರಣೆಗಳನ್ನು ಸಂಸದ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಹಸ್ತಾಂತರಿಸಿದರು.&nbsp;</p></div>

ರಾಮನಗರದ ಜಿಲ್ಲಾ ಪಂಚಾಯಿತಿಯಲ್ಲಿರುವ ಸಂಸದ ಕಚೇರಿಯಲ್ಲಿ ರಾಜಸ್ಥಾನ ಯೂತ್ ಅಸೋಸಿಯೇಷನ್‌ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಗೆ ಕಂಪ್ಯೂಟರ್‌ಗಳು ಮತ್ತು ಇತರ ಸಹಾಯಕ ಸಲಕರಣೆಗಳನ್ನು ಸಂಸದ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಹಸ್ತಾಂತರಿಸಿದರು. 

   

ರಾಮನಗರ: ರಾಜಸ್ಥಾನ ಯೂತ್ ಅಸೋಸಿಯೇಷನ್‌ ವತಿಯಿಂದ ಕನಕಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಆರು ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಗೆ ಅಗತ್ಯವಾದ ಕಂಪ್ಯೂಟರ್‌ಗಳು ಮತ್ತು ಇತರ ಸಹಾಯಕ ಸಲಕರಣೆಗಳನ್ನು ನಗರದ ಜಿಲ್ಲಾ ಪಂಚಾಯಿತಿ ಭವನದಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರ ಮೂಲಕ ಶನಿವಾರ ಹಸ್ತಾಂತರಿಸಿದರು.

ಸಂಸದ ಡಾ. ಮಂಜುನಾಥ್ ಅವರ ಸೂಚನೆ ಮೇರೆಗೆ, ಕನಕಪುರದ ಕೋಟೆಯ ಮಂಗಳ ವಿದ್ಯಾಮಂದಿರ, ಕೋಟೆಕೊಪ್ಪದ ಸರ್ಕಾರಿ ಶಾಲೆ, ಗಂಗಯ್ಯನದೊಡ್ಡಿ ಸರ್ಕಾರಿ ಶಾಲೆ, ಆದನಕುಪ್ಪೆಯ ಸರ್ಕಾರಿ ಶಾಲೆ, ಕಲ್ಲಹಳ್ಳಿಯ ಸರ್ಕಾರಿ ಶಾಲೆ ಹಾಗೂ ಕೂತಗೊಂಡನಹಳ್ಳಿಯ ಸರ್ಕಾರಿ ಶಾಲೆಗೆ ಹಸ್ತಾಂತರ ಮಾಡಿದರು.

ADVERTISEMENT

ಈ ವೇಳೆ ಮಾತನಾಡಿದ ಮಂಜುನಾಥ್, ‘ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣ ಎಂದರೆ, ಕೇವಲ ಪುಸ್ತಕಾಧಾರಿತ ಅಧ್ಯಯನವಲ್ಲ. ತಂತ್ರಜ್ಞಾನ ಜ್ಞಾನವೂ ಮಕ್ಕಳಿಗೆ ಸಮಾನವಾಗಿ ಅಗತ್ಯವಾಗಿದೆ. ಮಕ್ಕಳು ಭವಿಷ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾಗಿ ಬೆಳೆಯಬೇಕಾದರೆ, ಕಂಪ್ಯೂಟರ್ ಹಾಗೂ ತಂತ್ರಜ್ಞಾನ ಆಧಾರಿತ ಅಧ್ಯಯನವೇ ಅವಶ್ಯಕ’ ಎಂದರು.

‘ಈ ಹಿನ್ನಲೆಯಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಡಿಜಿಟಲ್ ಜ್ಞಾನವನ್ನು ತಲುಪಿಸುವುದೇ ಉದ್ದೇಶ ಎಂದು ತಿಳಿದು, ಸಾಮಾಜಿಕ ಜವಾಬ್ದಾರಿಯ ಅಂಗವಾಗಿ ಈ ಸೇವೆಯನ್ನು ಕೈಗೊಂಡಿರುವುದು ಮಾದರಿ ನಡೆಯಾಗಿದೆ’ ಎಂದು ಹೇಳಿದರು.

ಸಂಘದ ಅಧ್ಯಕ್ಷ ಶಾಂತು ಕೊಠಾರಿ, ಮಾಜಿ ಅಧ್ಯಕ್ಷ ಸಂಜಯ್ ಶಾ,‌ ಟ್ರಸ್ಟ್ ಮುಖ್ಯಸ್ಥ ರಾಜೇಶ್ ಶಾ, ಕಾರ್ಯದರ್ಶಿ ಕಾಮ್ಲೇಶ್ ಮಕಾನಾ, ಸಮಿತಿ ಸದಸ್ಯರು, ಶಾಲೆಗಳ ಮುಖ್ಯ ಶಿಕ್ಷಕರು, ಸ್ಥಳೀಯ ಮುಖಂಡರು ಹಾಗೂ ಗಣ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.