ADVERTISEMENT

ಮಾಗಡಿ: ಸರಳವಾಗಿ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 3:11 IST
Last Updated 26 ಜನವರಿ 2026, 3:11 IST
ಮಾಗಡಿ ತಾಲ್ಲೂಕಿನ ದೊಡ್ಡಯ್ಯನಪಾಳ್ಯದಲ್ಲಿ ಎ.ಎಚ್. ಬಸವರಾಜು ನೇತೃತ್ವದಲ್ಲಿ ಯರೇಹಳ್ಳಿ ಗ್ರಾಮದ ಆದಿತ್ಯ ಮತ್ತು ಅಜ್ಜನಹಳ್ಳಿ ಗ್ರಾಮದ ಸುಕನ್ಯಾ ಅವರು ಹೊಸ ಜೀವನಕ್ಕೆ ಕಾಲಿಟ್ಟರು
ಮಾಗಡಿ ತಾಲ್ಲೂಕಿನ ದೊಡ್ಡಯ್ಯನಪಾಳ್ಯದಲ್ಲಿ ಎ.ಎಚ್. ಬಸವರಾಜು ನೇತೃತ್ವದಲ್ಲಿ ಯರೇಹಳ್ಳಿ ಗ್ರಾಮದ ಆದಿತ್ಯ ಮತ್ತು ಅಜ್ಜನಹಳ್ಳಿ ಗ್ರಾಮದ ಸುಕನ್ಯಾ ಅವರು ಹೊಸ ಜೀವನಕ್ಕೆ ಕಾಲಿಟ್ಟರು   

ಮಾಗಡಿ: ತಾಲ್ಲೂಕಿನ ದೊಡ್ಡಯ್ಯನಪಾಳ್ಯದ ಲಕ್ಷ್ಮೀ ಪಟ್ಟಲದಮ್ಮ ದೇವಾಲಯದಲ್ಲಿ ಭಾನುವಾರ 27ನೇ ಜೋಡಿಯ ಸರಳ ವಿವಾಹ ಮಹೋತ್ಸವ ಬಿಜೆಪಿ ಮುಖಂಡ ಎ.ಎಚ್. ಬಸವರಾಜು ನೇತೃತ್ವದಲ್ಲಿ ನೆರವೇರಿತು. ಯರೇಹಳ್ಳಿ ಗ್ರಾಮದ ಆದಿತ್ಯ ಮತ್ತು ಅಜ್ಜನಹಳ್ಳಿ ಗ್ರಾಮದ ಸುಕನ್ಯಾ ಅವರು ಹೊಸ ಜೀವನಕ್ಕೆ ಕಾಲಿಟ್ಟರು.

‘ಬನಶಂಕರಿ ಸರಳ ವಿವಾಹ ಮಹೋತ್ಸವದಡಿ ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ಪ್ರತಿವರ್ಷ ಸಾಮೂಹಿಕ ವಿವಾಹ ಮಾಡಲಾಗುತ್ತದೆ. ತಾಲೂಕಿನ ಬಡವರಿಗೆ ಅನುಕೂಲವಾದ ದಿನ ಪಟ್ಟಲದಮ್ಮ ದೇವಾಲಯದಲ್ಲಿ ವಿವಾಹ ನೆರವೇರಿಸಲಾಗುತ್ತಿದೆ. ತಾಲ್ಲೂಕಿನಲ್ಲಿ ಸರಳವಾಗಿ ಮದುವೆಯಾದ 27ನೇ ಜೋಡಿ ಇದಾಗಿದೆ. ದುಂದುವೆಚ್ಚದ ಬದಲು ಸರಳವಾಗಿ ಮದುವೆಯಾಗುವುದರಿಂದ ಎರಡೂ ಕುಟುಂಬಗಳಿಗೆ ಒಳ್ಳೆಯದು’ ಎಂದು ಬಸವರಾಜು ಹೇಳಿದರು. 

ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ. ವೀರಭದ್ರಪ್ಪ, ಮುಖಂಡರಾದ ಎಂ.ಆರ್. ರಾಘವೇಂದ್ರ, ಆನಂದ್, ಪೋಟೋ ಮಾರಪ್ಪ, ಸೋಮೇಶ್ವರ ಬಡಾವಣೆ ಶಶಿ, ತಿರುಮಲೆ ಪಾಂಡುರಂಗಯ್ಯ, ಬೋರ್‌ವೆಲ್ ಮಣಿ, ಯತೀಶ್, ಕೆಂಚನಹಳ್ಳಿ ಕಿರಣ್, ತಿರುಮಲೆ ಪ್ರವೀಣ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT