ADVERTISEMENT

ಚನ್ನಪಟ್ಟಣ: 10 ಅಡಿ ಉದ್ದದ ಹೆಬ್ಬಾವು ಪತ್ತೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 2:35 IST
Last Updated 20 ಸೆಪ್ಟೆಂಬರ್ 2025, 2:35 IST
ಚನ್ನಪಟ್ಟಣ ತಾಲ್ಲೂಕಿನ ದೇವರ ಹೊಸಹಳ್ಳಿ ಗ್ರಾಮದಲ್ಲಿ ಪತ್ತೆಯಾದ ಹೆಬ್ಬಾವು ಅನ್ನು ವಲಯ ಅರಣ್ಯಾಧಿಕಾರಿ ರಾಂಪುರ ಮಲ್ಲೇಶ್ ಸುರಕ್ಷಿತವಾಗಿ ಹಿಡಿದರು
ಚನ್ನಪಟ್ಟಣ ತಾಲ್ಲೂಕಿನ ದೇವರ ಹೊಸಹಳ್ಳಿ ಗ್ರಾಮದಲ್ಲಿ ಪತ್ತೆಯಾದ ಹೆಬ್ಬಾವು ಅನ್ನು ವಲಯ ಅರಣ್ಯಾಧಿಕಾರಿ ರಾಂಪುರ ಮಲ್ಲೇಶ್ ಸುರಕ್ಷಿತವಾಗಿ ಹಿಡಿದರು   

ಚನ್ನಪಟ್ಟಣ: ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದ ಬಳಿ ತೋಟವೊಂದರಲ್ಲಿ 10 ಅಡಿ ಉದ್ದದ ಹೆಬ್ಬಾವು ಪತ್ತೆಯಾದ ಘಟನೆ ಗುರುವಾರ ಸಂಜೆ ನಡೆದಿದೆ.

ಎಲೆಕೇರಿ ರವೀಶ್ ಎಂಬುವರು ತಮ್ಮ ಜಮೀನನ್ನು ಜೆಸಿಬಿ ಮೂಲಕ ಸಮತಟ್ಟು ಮಾಡಿಸುತ್ತಿದ್ದರು. ಈ ವೇಳೆ ಪೊದೆಯೊಂದರಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ತಕ್ಷಣ ಅವರು ವಲಯ ಅರಣ್ಯಾಧಿಕಾರಿ ರಾಂಪುರ ಮಲ್ಲೇಶ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ.

ತಕ್ಷಣವೇ ತಮ್ಮ ಸಿಬ್ಬಂದಿ ಜೊತೆ ಸ್ಥಳಕ್ಕೆ ಬಂದ ರಾಂಪುರ ಮಲ್ಲೇಶ್ ಅವರು ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು, ಅದನ್ನು ರಕ್ಷಣೆ ಮಾಡಿದರು. ಆನಂತರ ಅದನ್ನು ಕಾಡಿಗೆ ಬಿಡಲಾಯಿತು. 

ADVERTISEMENT

ಈ ಜಮೀನಿನ ಮೇಲ್ಭಾಗದಲ್ಲಿ ಅರಣ್ಯ ಪ್ರದೇಶ ಇದ್ದು, ಅಲ್ಲಿಂದ ಆಹಾರ ಹುಡುಕಿಕೊಂಡು ಈ ಹೆಬ್ಬಾವು ತೋಟಕ್ಕೆ ಬಂದಿರಬಹುದು. ಇಂತಹ ಪ್ರಕರಣಗಳು ಕಂಡುಬಂದರೆ ಸಾರ್ವಜನಿಕರು ಅವುಗಳ ಮೇಲೆ ಪ್ರಹಾರ ಮಾಡದೆ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರೆ ಅದನ್ನು ಸುರಕ್ಷಿತ ಮಾಡಲಾಗುವುದು ಎಂದು ಮಲ್ಲೇಶ್ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.