ADVERTISEMENT

ಕನಕಪುರ: ವಿಶೇಷ ಉಪನ್ಯಾಸ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 4:02 IST
Last Updated 16 ಫೆಬ್ರುವರಿ 2021, 4:02 IST
ರೂರಲ್‌ ಪದವಿ ಕಾಲೇಜಿನಲ್ಲಿ ನಡೆದ ಕನ್ನಡ ಸಾಹಿತ್ಯ ವಿಚಾರ ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಧ್ಯಾಪಕ ಡಾ.ರಘುನಂದನ್‌ ನೆರವೇರಿಸಿದರು
ರೂರಲ್‌ ಪದವಿ ಕಾಲೇಜಿನಲ್ಲಿ ನಡೆದ ಕನ್ನಡ ಸಾಹಿತ್ಯ ವಿಚಾರ ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಧ್ಯಾಪಕ ಡಾ.ರಘುನಂದನ್‌ ನೆರವೇರಿಸಿದರು   

ಕನಕಪುರ: ಕನ್ನಡ ಸಾಹಿತ್ಯ ಮತ್ತು ನಾಡಿನ ಸಂಸ್ಕೃತಿಯನ್ನು ಒಳಗೊಂಡಿರುವುದೇ ಕನ್ನಡ ಭಾಷೆಯಾಗಿದೆ. ಸಾಹಿತ್ಯ ಸಾಂತ್ವನ ನೀಡಿದಾಗ ಭಾಷೆ ಗೆಲ್ಲುತ್ತದೆ ಎಂದು ಪ್ರಾಧ್ಯಾಪಕ ಡಾ.ರಘುನಂದನ್‌ ಬೇಗೂರು ತಿಳಿಸಿದರು.

ಇಲ್ಲಿನ ರೂರಲ್‌ ಪದವಿ ಕಾಲೇಜಿನ ಕನ್ನಡ ವಿಭಾಗದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ವಿಚಾರ ವೇದಿಕೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾಂಶುಪಾಲ ಡಾ.ಎಂ. ಗೋವಿಂದಪ್ಪ ಮಾತನಾಡಿದರು.ಕನ್ನಡ ವಿಭಾಗದ ಮುಖ್ಯಸ್ಥ ಡಾ.ವಿ.ಎನ್‌. ಮಂಜುನಾಥ್‌, ಆರ್‌ಇಎಸ್‌ ಅಧ್ಯಕ್ಷ ಸಿ. ರಮೇಶ್‌, ಉಪನ್ಯಾಸಕರಾದ ಶಿವನಾಯ್ಕ್‌, ಆರ್‌.ಕೆ. ನಂಜುಂಡಸ್ವಾಮಿ, ವಿನೋದ್‌, ನಂದಿನಿ, ಜ್ಯೋತಿ, ಪವಿತ್ರಾ, ಭಾಗ್ಯಾ, ತೇಜಸ್ವಿನಿ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.