ADVERTISEMENT

ವುಷು ಸ್ಪರ್ಧೆ: ರಾಮನಗರಕ್ಕೆ 3 ಪದಕ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 5:52 IST
Last Updated 9 ಅಕ್ಟೋಬರ್ 2024, 5:52 IST
ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾಕೂಟದ  ವುಷು ಸ್ಪರ್ಧೆಯಲ್ಲಿ ರಾಮನಗರ ಜಿಲ್ಲಾ ವುಷು ಸಂಸ್ಥೆಯ ಕ್ರೀಡಾಪಟುಗಳಾದ ಎಚ್. ಮಾನಸ ಬೆಳ್ಳಿ ಪದಕ, ಎಚ್. ಸರೋವರ ಮತ್ತು ಹರ್ಷವರ್ಧನ್ ನಾಯ್ಕ ಕಂಚಿನ ಪದಕ ಗೆದ್ದಿದ್ದಾರೆ. ಮುಖ್ಯ ತರಬೇತಿದಾರ ಹೊನ್ನಗಂಗಪ್ಪ, ತರಬೇತುದಾರರಾದ ಹರೀಶ್ ಹಾಗೂ ಹಿತೈಷಿ ಇದ್ದಾರೆ

ರಾಮನಗರ: ದಸರಾ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟ ಸಿ.ಎಂ ಕಪ್-2024ರ ವುಷು ಸ್ಪರ್ಧೆಯಲ್ಲಿ ಭಾಗವಹಿಸಿದ ರಾಮನಗರ ಜಿಲ್ಲಾ ವುಷು ಸಂಸ್ಥೆಯ ಕ್ರೀಡಾಪಟುಗಳು 1 ಬೆಳ್ಳಿ ಹಾಗೂ 2 ಕಂಚಿಕ ಪದಕಗಳನ್ನು ಗೆದ್ದಿದ್ದಾರೆ.

12ರಿಂದ 18 ವರ್ಷಗಳ ವಯೋಮಾನದ ನನ್ ಗುನ್ ವಿಭಾಗದಲ್ಲಿ ಎಚ್. ಮಾನಸ ಬೆಳ್ಳಿ ಪದಕ ಹಾಗೂ ತಾವುಲು ಚಾನ್ಕ್ವಾನ್‌ನಲ್ಲಿ ಎಚ್. ಸರೋವರ ಕಂಚಿನ ಪದಕ ಮತ್ತು ಸಾಂಡಾ (ಫೈಟಿಂಗ್) ವಿಭಾಗದಲ್ಲಿ ಹರ್ಷವರ್ಧನ್ ನಾಯ್ಕ ಕಂಚಿನ ಪದಕ ಗೆದ್ದಿದ್ದಾರೆ.

ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದು ಜಿಲ್ಲೆಗೆ ಕೀರ್ತಿ ತಂದಿರುವ ಕ್ರೀಡಾಪಟುಗಳನ್ನು ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ತರಬೇತುದಾರರಾದ ಹರೀಶ್, ಹಿತೈಷಿ ಹಾಗೂ ಮುಖ್ಯ ತರಬೇತುದಾರ ಹೊನ್ನಗಂಗಪ್ಪ ಮತ್ತು ತಂಡದ ವ್ಯವಸ್ಥಾಪಕ ಸಂತೋಷ್ ಅಭಿನಂದಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.