ADVERTISEMENT

ಕನಕಪುರ: ಸಬ್‌ ರಿಜಿಸ್ಟ್ರರ್‌ ‌ಕಚೇರಿ ಸೀಲ್‌ಡೌನ್‌ ‌

ಇಬ್ಬರು ಅಧಿಕಾರಿಗಳಿಗೆ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 3:53 IST
Last Updated 18 ಏಪ್ರಿಲ್ 2021, 3:53 IST
ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸೋಂಕು ನಿವಾರಕ ಔಷಧಿ ಸಿಂಪಡಿಸಲಾಯಿತು
ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸೋಂಕು ನಿವಾರಕ ಔಷಧಿ ಸಿಂಪಡಿಸಲಾಯಿತು   

ಕನಕಪುರ: ಇಲ್ಲಿನ ಉಪ ನೋಂದಣಾಧಿಕಾರಿ ಕಚೇರಿಯ ಇಬ್ಬರು ಉಪ ನೋಂದಣಾಧಿಕಾರಿಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಕಚೇರಿಯನ್ನು ಶನಿವಾರ ಸೀಲ್‌ಡೌನ್ಮಾಡಲಾಗಿದೆ.

ಎರಡು ದಿನಗಳ ಹಿಂದೆ ನೋಂದಣಾಧಿಕಾರಿಗಳಾದ ಎಲ್‌. ಚಂಪಾ, ನಂದೀಶ್‌ ಹಾಗೂ ಎಸ್‌ಡಿಎ ಲಿಂಗರಾಜು ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ತಪಾಸಣೆ ಮಾಡಿಸಿದಾಗ ಕೋವಿಡ್‌ ಇರುವುದು ದೃಢಪಟ್ಟಿದೆ. ಹಾಗಾಗಿ,ಜಿಲ್ಲಾ ನೋಂದಣಾಧಿಕಾರಿ ಶ್ರೀಧರ್‌ ಅವರು ಎರಡು ದಿನಗಳ ಕಾಲ ಕಚೇರಿಯನ್ನು ಸ್ಥಗಿತಗೊಳಿಸುವಂತೆಆದೇಶಿಸಿದ್ದಾರೆ.

ನಗರಸಭೆಯಿಂದ ಕಚೇರಿಯಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಿದ್ದು, ಸೋಮವಾರದವರೆಗೆ ಕಚೇರಿಯ ಎಲ್ಲಾ ವಹಿವಾಟುಗಳನ್ನು ಸ್ಥಗಿತಗೊಳಿಸಿ ಮುಚ್ಚಲಾಗಿದೆ ಎಂದು ಕಚೇರಿಯ ವಿಘ್ನೇಶ್‌ ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.