ADVERTISEMENT

ಅಗಲಕೋಟೆ ಗ್ರಾ.ಪಂ ಅಧ್ಯಕ್ಷೆ ಸುಮಿತ್ರಮ್ಮ ಲಿಂಗೇಶ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 14:33 IST
Last Updated 26 ಸೆಪ್ಟೆಂಬರ್ 2024, 14:33 IST
ಮಾಗಡಿ ತಾಲ್ಲೂಕಿನ ಅಗಲಕೋಟೆ ಗ್ರಾ.ಪಂ.ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸುಮಿತ್ರಮ್ಮ ಲಿಂಗೇಶ್ ರವರನ್ನು ಮುಖಂಡರು ಅಭಿನಂದಿಸಿದರು.
ಮಾಗಡಿ ತಾಲ್ಲೂಕಿನ ಅಗಲಕೋಟೆ ಗ್ರಾ.ಪಂ.ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸುಮಿತ್ರಮ್ಮ ಲಿಂಗೇಶ್ ರವರನ್ನು ಮುಖಂಡರು ಅಭಿನಂದಿಸಿದರು.   

ಮಾಗಡಿ : ತಾಲ್ಲೂಕಿನ ಅಗಲಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಮಿತ್ರಮ್ಮ ಲಿಂಗೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗುರುವಾರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸುಮಿತ್ರಮ್ಮ ಲಿಂಗೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಮುಂದಿನ ಅವಧಿಗೆ ಅಧ್ಯಕ್ಷರಾಗಿ ಅವಿರೋಧ  ಆಯ್ಕೆ ಮಾಡಲಾಯಿತು. ಚುನಾವಣಾ ಅಧಿಕಾರಿಯಾಗಿ ಚರಣ್ ಕುಮಾರ್ ಕಾರ್ಯನಿರ್ವಹಿಸಿದರು.

ದಿಶಾ ಸಮಿತಿ ಸದಸ್ಯ ಜೆ.ಪಿ. ಚಂದ್ರೇಗೌಡ, ಪಂಚಾಯಿತಿ ಉಪಾಧ್ಯಕ್ಷೆ ಲಲಿತಮ್ಮ, ಸದಸ್ಯರಾದ ಕುಮಾರ್, ಮಧು, ಬಿ.ಎನ್.ಶಿವಣ್ಣ, ಮಂಜುಳಾ ಧನಂಜಯ್ಯ, ಮಹಾಲಕ್ಷ್ಮಿಮ್ಮ, ಲಲಿತಮ್ಮ, ಮನು, ಎಂ.ದಿನೇಶ್, ಎಂ.ಆರ್.ಗೀತಾ, ಮಾದಮ್ಮ, ಕಾಂಗ್ರೆಸ್ ಮುಖಂಡರಾದ ತಾ.ಪಂ.ಮಾಜಿ ಅಧ್ಯಕ್ಷ ಕಾಂತರಾಜು, ಚಕ್ರಬಾವಿ ಬಸವರಾಜು, ಸಿ.ಬಿ.ರವೀಂದ್ರ, ಕೋರಮಂಗಲ ಶ್ರೀನಿವಾಸ್, ಬಿ.ಟಿ.ವೆಂಕಟೇಶ್, ಮಹದೇವ್, ಕಂಬೇಗೌಡ ಪಿಡಿಒ ಪ್ರಭುಲಿಂಗಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.