ADVERTISEMENT

ರಾಮನಗರ | ಟೇಕ್ವಾಂಡೊ: ಶಾನ್ವಿಗೆ ಬೆಳ್ಳಿ ಪದಕ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 2:22 IST
Last Updated 5 ಸೆಪ್ಟೆಂಬರ್ 2025, 2:22 IST
ಶಾನ್ವಿ ಸತೀಶ್
ಶಾನ್ವಿ ಸತೀಶ್   

ರಾಮನಗರ: ತಮಿಳುನಾಡಿನ ಚೆನ್ನೈನ ಸೇಂಟ್ ಮಾನ್‌ಪೋರ್ಟ್ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಟೇಕ್ವಾಂಡೊ ಸ್ಪರ್ಧೆಯಲ್ಲಿ ನಗರದ ಬಾಲಕಿ ಶಾನ್ವಿ ಸತೀಶ್ ಬೆಳ್ಳಿ ಪದಕ ಜಯಿಸಿದ್ದಾಳೆ. ಸ್ಪರ್ಧೆಯ 7ರಿಂದ 11 ವಯೋಮಾನದವರ 23–30 ಕೆ.ಜಿ ತೂಕದ ವಿಭಾಗದ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಶಾನ್ವಿ, ಸ್ಪಾರಿಂಗ್‌ನಲ್ಲಿ ಬೆಳ್ಳಿ ಸಾಧಿಸಿದ್ದಾಳೆ.

ಸ್ಪರ್ಧೆಯಲ್ಲಿ ಕರ್ನಾಟಕ, ತಮಿಳುನಾಡು, ತೆಲಂಗಾಣ, ದೆಹಲಿ, ಗುಜರಾತ್, ಒಡಿಶಾ, ಕೇರಳ ರಾಜ್ಯಗಳ 600ಕ್ಕೂ ಹೆಚ್ಚು ಕ್ರಿಡಾಪಟುಗಳು ಭಾಗವಹಿಸಿದ್ದರು. ಶಾನ್ವಿ ಈ ಹಿಂದೆ ದುಬೈ, ಉಜ್ಬೇಕಿಸ್ತಾನ್, ಏಷಿಯನ್ ಚಾಂಪಿಯನ್‌ಶಿಪ್ ಹಾಗೂ ಮಲೇಷ್ಯಾದಲ್ಲಿ ನಡೆದಿದ್ದ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದಿದ್ದಳು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಸತೀಶ್ ಹಾಗೂ ಚೈತ್ರಾ ದಂಪತಿ ಪುತ್ರಿಯಾದ ಶಾನ್ವಿಗೆ, ಭಾರತ ತಂಡದ ತರಬೇತುದಾರ ಪ್ರದೀಪ್ ಮತ್ತು ಬಾಲರಾಜನ್ ತರಬೇತಿ ನೀಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.